17-8-2022. ಬುಧವಾರ.

ಯಲ್ಲಾಪುರ ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ 15 ಅಡಿ ಎತ್ತರದ ಆಕರ್ಷಕ ಕಾಷ್ಠ ರಥವನ್ನು ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣರ ಶ್ರೀಕೃಷ್ಣ ದೇವಾಲಯಕ್ಕೆಂದು ಈ ರಥವನ್ನು ನಿರ್ಮಿಸಲಾಗಿದೆ.

ಆಧುನಿಕ ಹೈಡ್ರಾಲಿಕ್ ವ್ಯವಸ್ಥೆಯುಳ್ಳ ಈ ರಥಕ್ಕೆ ಸಾಗವಾನಿ, ಹೊನ್ನೆ ಸೇರಿದಂತೆ ವಿವಿಧ ಬಗೆಯ ಕಟ್ಟಿಗೆಗಳನ್ನು ಬಳಸಲಾಗಿದೆ. ಬಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಅರುಣ ಗುಡಿಗಾರ ಹಾಗೂ ಆದಿತ್ಯ ಗುಡಿಗಾರ ಮತ್ತು 8 ಜನ ಶಿಲ್ಪಿಗಳು ಮೂರು ತಿಂಗಳ ಪರಿಶ್ರಮದಿಂದ ಈ ರಥವನ್ನು ನಿರ್ಮಿಸಿದ್ದು, ಬುಧವಾರ ರಥಕ್ಕೆ ಶಾಶ್ತ್ರೋಕ್ತವಾಗಿ ಪೂಜೆ ಸಲ್ಲಿ ಸಲಾಯಿತು.

ಕಪ್ಪೆಮಠದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಾನಾ ಕಾರ್ಯಕ್ರಮ.

ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಕಪ್ಪೆಮಠದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕೃಷ್ಣಾಷ್ಟಮಿ ನಿಮಿತ್ತ ಆ.18 ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಮಹಿಳೆಯಿರಿಂದ ಕುಂಕುಮಾರ್ಚನೆ ನಡೆಯಲಿದ್ದು, ಸಂಜೆ ಶ್ರೀಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮ ಜರುಗಲಿದೆ. ತಾಳಮದ್ದಳೆ ಯಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ, ಮದ್ದಳೆಯಲ್ಲಿ ಶಂಕರ ಭಾಗ್ವತ ಯಲ್ಲಾಪುರ ಮತ್ತು ಅರ್ಥಧಾರಿಗಳಾಗಿ ಕೌರವನ ಪಾತ್ರದಲ್ಲಿ ಅಶೋಕ ಭಟ್ಟ ಉಜಿರೆ, ಕೃಷ್ಣನಾಗಿ ಹರೀಶ ಬಳಂತಿಮೊಗರು, ವಿದುರನಾಗಿ ಡಾ.ಡಿ.ಕೆ.ಗಾಂವ್ಕಾರ ಭಾಗವಹಿಸುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮwhats app group ಗೆ join ಆಗಿ. https://chat.whatsapp.com/L2CReGIOXdX7UXCxXicb4Q

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.co

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading