


4-9-2022. ರವಿವಾರ.
ವಿಶೇಷ ಲೇಖನ.

ಯಲ್ಲಾಪುರ ಪಟ್ಟಣದ ಹೋಲಿರೋಜರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಅಂತೋನ ಎಸ್ ರೋಡ್ರಿಗಸ್ ಅವರು ಪ್ರಸಕ್ತ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಉತ್ತಮ ವಾಲಿಬಾಲ್ ಕ್ರೀಡಾಪಟುಗಳೂ ಆಗಿರುವುದು ವಿಶೇಷವಾಗಿದೆ. 2001 ನೇ ಸಾಲಿನಲ್ಲಿ ಯಲ್ಲಾಪುರ ತಾಲೂಕಾ ಮಟ್ಟದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಸಂಕಲ್ಪ ಉತ್ಸವದ ಪ್ರಶಸ್ತಿ ಹಾಗೂ ಹಲವು ಸಂಘ-ಸಂಸ್ಥೆಗಳಿಂದ ಪುರಸ್ಕಾರಗಳನ್ನು ಪಡೆದಿದ್ದಾರೆ.



ಇವರು ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದಲ್ಲಿ ಜನಿಸಿ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದು ನಂತರ ಶಿರಸಿಯ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ ಕಾಲೇಜು ಜೀವನದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ದ್ದು 100 ಮೀಟರ್ 200ಮೀಟರ್ ತೋಟಗಳಲ್ಲಿ ಹಾಗೂ ಎಸೆತದ ವಿಭಾಗಗಳಲ್ಲಿ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು ಹಾಗೂ ಕಾನೂನು ಮಹಾವಿದ್ಯಾಲಯದಲ್ಲಿ ಓದುತ್ತಿರುವಾಗ ಇವರು ವಾಲಿಬಾಲ್ ಆಟದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು ಕಾಲೇಜು ಜೀವನದಲ್ಲಿ ಜಿಲ್ಲೆಯಾದ್ಯಂತ ಹೆಸರನ್ನು ಮಾಡಿದ್ದರು.

ನಂತರ ಹೋಲಿ ರೋಜರಿ ಪ್ರೌಢಶಾಲೆ ಯಲ್ಲಾಪುರದಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಯಲ್ಲಾಪುರ ತಾಲೂಕಿನ ಪ್ರತಿಷ್ಠಿತ ಹಲವು ಗ್ರಾಮಗಳಲ್ಲಿ ವಾಲಿಬಾಲ್ ಆಟಗಾರರಾಗಿ ಇವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುವಂತೆ ಮಾಡಿದ್ದಾರೆ ಇವರ ಪರಿಣಿತಿ ವಾಲಿಬಾಲ್ ಆಟವಾಗಿದ್ದರೂ ಇವರು ಓಟದ ಆಟಗಾರರನ್ನು ತಯಾರು ಮಾಡಿದ್ದಾರೆ. ಬುಡಕಟ್ಟು ಸಿದ್ದಿ ಜನಾಂಗದ ಅನೇಕ ವಿದ್ಯಾರ್ಥಿಗಳು ರಾಜ್ಯ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ತರಬೇತಿ ನೀಡಿದ್ದಾರೆ.


ತಾಲೂಕ ಮಟ್ಟದ ಉತ್ತಮ ನಿರ್ವಹಣೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಕ್ರೀಡಾಕೂಟದ ಬಗ್ಗೆ ಅರಿವಿನ ಅನೇಕ ಕಾರ್ಯಕ್ರಮಗಳನ್ನು ನಿರ್ವಹಿಸಿರುತ್ತಾರೆ. ಕ್ರೀಡಾಕೂಟಗಳ ಸಂಘಟನೆಗಳಲ್ಲಿ ಹಾಗೂ ಕ್ರೀಡಾಕೂಟಗಳನ್ನು ನಡೆಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿರುವ ಅಂತಹ ವಿದ್ಯಾರ್ಥಿಗಳ ಪಿರ್ಯಾಮಿಡ್ ಗಳನ್ನು ಮಾಡುವ ಒಬ್ಬ ಶಿಕ್ಷಕರಾಗಿದ್ದಾರೆ.

ಹೊನಲು ಬೆಳಕಿನಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಿ ಯಶಸ್ಸನ್ನು ಪಡೆದಿರುವ ಕ್ರೀಡಾಕೂಟಗಳನ್ನು ಉತ್ತಮವಾಗಿ ಸಂಘಟಿಸಿ ಅವುಗಳಿಂದ ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗ್ಗೆ ಅಭಿಮಾನ ಪ್ರೀತಿ ಹುಟ್ಟುವಂತೆ ಮಾಡಿರುತ್ತಾರೆ 1991 ರಿಂದ ಇಲ್ಲಿಯವರೆಗೆ ಸುಮಾರು 32 ವರ್ಷಗಳ ಕಾಲ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ಅಡಿಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತವಾದ ಸ್ಥಾನವನ್ನು ತಲುಪಿದ್ದಾರೆ.

ತಮಗೆ ವಹಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಆ ಕೆಲಸ ಮುಗಿಯುವವರೆಗೆ ಅದನ್ನ ಬಿಡದೆ ಹಾಗೂ ಆ ಕೆಲಸವನ್ನು ನಿರ್ವಹಿಸುವ ಏಕಾಗ್ರತೆ ಹೊಂದಿರುವಂತ ಶಿಕ್ಷಕರಾಗಿದ್ದಾರೆ. ಉತ್ತಮವಾದಂತಹ ಕ್ರೀಡಾಕೂಟವನ್ನು ಹಾಗೂ ಕ್ರೀಡೆಯ ಪ್ರೀತಿಸುವ ಇವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇವರಿಗೆ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು,ಪಾಲಕರು, ಶೈಕ್ಷಣಿಕ ಕ್ಷೇತ್ರದ ಅನೇಕರು ಅಭಿನಂದಿಸಿದ್ದಾರೆ.








