3-9-2022. ಶನಿವಾರ.
ವಿಶೇಷ ಲೇಖನ.

ಯಲ್ಲಾಪುರ ತಾಲೂಕಿನ ಕಿರವತ್ತಿ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ನಾಯಕ ಅವರು ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶೈಕ್ಷಣಿಕ ಸೇವೆಯನ್ನಷ್ಟೇ ತಮ್ಮ ಗುರಿಯಾಗಿಸಿಕೊಂಡು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಸಲ್ಲಿಸಿ ಬೋಧನಾನುಭವದ ಜೊತೆಗೆ ಬಿ.ಎ, ಬಿ.ಎಡ್, ಎಂ.ಎ, ಎಂ.ಎಡ್ ಪದವಿಗಳನ್ನು ಪಡೆದ ಇವರು, 1992 ರಲ್ಲಿ ಜೋಗಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆ ಯಲ್ಲಾಪುರ ತಾಲೂಕಿನಲ್ಲಿ ವೃತ್ತಿಜೀವನ ಆರಂಭಿಸಿ ಜೊತೆಗೆ ಸಾಮಾಜಿಕ ಸೇವೆಯನ್ನು ಮುನ್ನಡೆಸಿಕೊಂಡು ಶಾಲೆಯ ಬಿಡುವಿನ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದ ಇವರ ಪ್ರತಿಭೆ ಗುರುತಿಸಿದ ಇಲಾಖೆ ಶೈಕ್ಷಣಿಕ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸೇವಾಮನೋಭಾವನೆಯನ್ನು ಹೊಂದಿದ ಇವರು ಶೈಕಣಿಕ ಕ್ಷೇತ್ರದಲ್ಲಿ ಏನಾದರೂ ಹೊಸತನ ಸಾಧಿಸಿ ಗುಣಾತ್ಮಕ ಬದಲಾವಣೆ ತರುವ ಹಂಬಲದವರಾಗದ್ದು ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಹಿಂದುಳಿದ ಸಮುದಾಯಕ್ಕೆ ಸೇರಿದ ಗೌಳಿ, ಸಿದ್ದಿ, ಮರಾಠಿ ಸಮುದಾಯದವರಿಗೆ ಬೋಧಿಸುವ ಸವಾಲನ್ನು ಸ್ವೀಕರಿಸಿ ಸಮುದಾಯದೊಂದಿಗೆ ಪಾಲಕರೊಂದಿಗೆ ನೇರ ಸಂಪರ್ಕದಲ್ಲಿದ್ದುಕೊಂಡು ಇಲಾಖೆಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಶಾಲೆಗೆ ಬೌತಿಕ/ಶೈಕ್ಷಣಿಕ/ಕ್ರೀಡಾ ಪರಿಕರಗಳನ್ನು ಹಿಂದೂಸ್ಥಾನ ಎರೋನಾಟಿಕ ಲಿಮಿಟೆಡ್, ಅಳಿಲು ಸೇವಾ ಕೂಟ ಬೆಂಗಳೂರು ಇವರಿಂದ ನಲಿಕಲಿ ಟೇಬಲ್, ಕುರ್ಚಿ, MCF ಮಂಗಳೂರು ಕಂಪನಿಯಿಂದ ಡೆಸ್ಕ್, ಗ್ರೀನ್ ಬೋರ್ಡ, ಸಹ್ಯಾದ್ರಿ ಸಂಚಯನ ಮಂಗಳೂರು ಇವರಿಂದ ಸ್ಕೂಲ್ ಬ್ಯಾಗ್, ಪೌಚ್, ಕ್ರೇಯಾನ್ಸ್, ರೇನಕೋಟ್, ಛತ್ರಿ, ಬ್ಯಾಡಮಿಂಟನ್ ಬ್ಯಾಟ್, ನೋಟ್‍ಬುಕ್ಸ್, ಪೆನ್ನು, ಗಣಿತ ಕಿಟ್, ಹಾಗೆ 5 ಲಕ್ಷ ರೂ ಮೌಲ್ಯದ ಕಲಿಕಾ ಸಾಮಾಗ್ರಿ ಸಂಗ್ರಹಿಸಿ ಬಡ ಮಕ್ಕಳ ಕಲಿಕೆಯ ಗುಣಮಟ್ಟಕ್ಕೆ ಪ್ರಯತ್ನಸಿದ್ದಾರೆ.

ಇವರು ಸೇವೆ ಸಲ್ಲಸಿದ ಶಾಲೆಗಳು ಉತ್ತಮ ಕಲಿಕಾ ವಾತಾವರಣ ಶಾಲಾ ಸೌಂದರ್ಯಕರಣದಲ್ಲಿ ಎಸ್.ಡಿ.ಎಂ.ಸಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.ಸದಾ ಚಂತನಾಶೀಲರಾಗಿ ಕಲಿಕೋಪಕರಣ ಸಿದ್ದತೆ ಪಾಠಬೋಧನೆ, ವಿಶ್ಲೇಷಣೆ, ತರಬೇತಿ ವಿನ್ಯಾಸ ಕಲೆಗಳಲ್ಲಿ ಸಿದ್ದಹಸ್ತರಾಗಿ ಕ್ಲಿಷ್ಟಕರ ಪರಿಕಲ್ಪನೆಯನ್ನು ತಾವು ಮೊದಲು ಅರಗಿಸಿಕೊಂಡು ಜಿಲ್ಲೆಯ ಎಲ್ಲಾ ಹಂತದ ಶೈಕ್ಷಣಿಕ ಅನುಷ್ಠಾನ ಹಂತದ ಅಧಿಕಾರಿಗಳಿಗೆ ಪರಿಚಯಿಸಿ ತರಬೇತಿ ನೀಡಿ ಜಿಲ್ಲೆಯ ಅತ್ಯುತ್ತಮ ಸಂವಹನ ಸಂಪನ್ಮೂಲ ವ್ಯಕ್ತಿಯಾಗಿ ಹೆಸರು ಮಾಡಿದ್ದಾರೆ.ತಮ್ಮ ಅನುಭವ ಸಂಪೂರ್ಣ ಆಕರ್ಷಕ ಮಾತಿನಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಘಟಿಸುವ ಚಾಕಚಕ್ಯತೆಯ ಕ್ರೀಯಾಶೀಲ ಶಿಕ್ಷಕರಾಗಿದ್ದಾರೆ.

ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw

ಇವರು ಸ್ಕೌಟ್ ಗೈಡ್ಸ್ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರಮಟ್ಟದ ಮಕ್ಕಳ ಮೇಳದಲ್ಲಿ ತಾಲೂಕಿನ ಮಕ್ಕಳನ್ನು ಕರೆದೊಯ್ದು ಅದರ ಅನುಭವವನ್ನು ಹಂಚಿಕೊಂಡಿದ್ದಾರೆ. ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಯಲ್ಲಾಪುರದ ಸ್ಕೌಟ್ ಗೈಡ್ಸ್ ಮಕ್ಕಳು ಭಾಗವಹಿಸಲು ಮಾರ್ಗದರ್ಶನ ಮಾಡಿರುತ್ತಾರೆ. ಭಾವೈಕ್ಯತೆ ಮೇಳ, ಸರ್ವಧರ್ಮ ಪ್ರಾರ್ಥನೆ, ರಾಜ್ಯಪಾಲರ ಪ್ರಶಸ್ತಿ ಪುರಸ್ಕಾರ ಮಕ್ಕಳಿಗೆ ಮಾರ್ಗದರ್ಶನ ಮಾಡಿರುತ್ತಾರೆ. ಇವರ ಕ್ರೀಯಾಶೀಲತೆ ವೃತ್ತಿಬದ್ದತೆ, ಸ್ನೇಹಪರತೆ ಇವುಗಳಿಂದಾಗಿ ತಾಲೂಕಾ ಕಾನೂನು ಸೇವಾಸಮಿತಿ ಪ್ಯಾರಾ ಲೀಗಲ್ ವಾಲೆಂಟಿಯರಾಗಿ ಸೇವೆ ಸಲ್ಲಿಸುತ್ತಾ ರಾಜ್ಯಮಟ್ಟದ ಸಿವಿಲ್ ನ್ಯಾಯಾದೀಶರ ಸಮ್ಮೇಳನದಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಮಕ್ಕಳ ಶಿಕ್ಷಣ ಹಕ್ಕುಗಳ ಬಗ್ಗೆ ಪ್ರಬಂಧ ಮಂಡಿಸುವುದರ ಜೊತೆ ಲೀಗಲ್ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕನ್ನಡ ಜಾನಪದ ಪರಿóತ್ತಿನ ಅಧ್ಯಕ್ಷರಾಗಿ ಬುಡಕಟ್ಟು ಜನಾಂಗದ ಕಲೆಯು ಅನಾವರಣಗೊಳ್ಳಲು ವೇದಿಕೆ ಸಿದ್ದಪಡಿಸಿ ನಾಟಿವೈದೈರನ್ನು ಸನ್ಮಾನಿಸಿ ಶಾಲಾ ಮಕ್ಕಳಲ್ಲಿ ಕುತೂಹಲಕ್ಕೆ ನಾಂದಿ ಹಾಡಿದ್ದಾರೆ.ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಪಠ್ಯ ಚಟುವಟಿಕೆ ಅತಿ ಮುಖ್ಯವೆಂದು ಅರಿತು ಶಾಲಾ ಮಕ್ಕಳಿಗೆ ಪ್ರತಿ ಶನಿವಾರ ಬ್ಯಾಗಲೇಸ್ ಡೇ ಮೂಲಕ ನೂರಿತ ಮಕ್ಕಳ ಕಥೆಗಾರರನ್ನು ಶಾಲೆಗೆ ಕರೆಯಿಸಿ ಮಕ್ಕಳಿಗೆ ಬಾಲ್ಯದಲ್ಲಿ ಕಥೆ ಬರೆಯುವ ಕೌಶಲ್ಯಗಳ ಕುರಿತು ತರಬೇತಿ/ಮಾರ್ಗದರ್ಶನ ನೀಡಿ “ಹಕ್ಕಿಪುಕ್ಕ” ಮಕ್ಕಳಿಂದ ರಚಿತವಾದ ಕಥೆಗಳ ಸಂಗ್ರಹ ಪುಸ್ತಕವನ್ನು ಮುದ್ರಣ ಮಾಡಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಮಕ್ಕಳಲ್ಲಿರುವ ಸೃಜನಶೀಲ ಗುಣಗಣ ಅನಾವರಣಕ್ಕೆ ಸಾಕ್ಷಿಯಾಗಿದ್ದಾರೆ.

ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನಕ್ಕೆ ಶಾಲಾಮಕ್ಕಳು ಆಯ್ಕೆಯಾಗಲು ಮಾರ್ಗದರ್ಶನ ನೀಡಿರುತ್ತಾರೆ. ಇವರ ಶಾಲೆಗೆ ಆದರ್ಶ ಶಾಲೆ ಪ್ರಶಸ್ತಿ, ಗುಣಾತ್ಮಕ ಶಾಲೆ ಪ್ರಶಸ್ತಿ, ಹಸಿರುಮಿತ್ರ ಶಾಲೆ ಪ್ರಶಸ್ತಿ ಪಡೆದಿದ್ದು ಪ್ರತಿಬಾ ಕಾರಂಜಿಯಲ್ಲಿ ಜಾನಪದ ನೃತ್ಯಗಳಲ್ಲಿ ಜಿಲ್ಲಾ ಪ್ರಶಸ್ತಿ ಕ್ರೀಡಾಕೂಟದಲ್ಲಿ ವಿಭಾಗಮಟ್ಟದ ಪ್ರಶಸ್ತಿ ಪಡೆಯುವಲ್ಲಿ ಸುಧಾಕರ ನಾಯಕ ರವರ ಪಾತ್ರ ಹಿರಿಯದಾಗಿದೆ.ಸರಕಾರಿ ಶಾಲೆಗಳು ಖಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಲು ವೈಜ್ಞಾನಿಕ ತಂತ್ರಜ್ಞಾನ ಪಿ.ಪಿ.ಟಿ ಪ್ರೊಜೆಕಟ್ಟರ್‍ನ ಮೂಲಕ ಕಂಪ್ಯೂಟರ್ ಮೂಲಕ ಕಲಿಕೆ ಸುಲಭಕರಿಸಲು ದಾನಿಗಳ ಸಹಕಾರದಿಂದ ತಂತ್ರಜ್ಞಾನ ಶಾಲೆಯಲ್ಲಿ ಅಳವಡಿಸಿದ್ದಾರೆ.

ಸಮಾಜದ ಭಾಗವೇ ಆಗಿರುವ ವಿದ್ಯಾರ್ಥಿಗಳಿಗೆ ಸಾಮಾಜಿಕ ಪ್ರಜ್ಞೆ ಮೂಡಿಸಲು ಹಲವಾರು ಕಾರ್ಯಕ್ರಮ ಸಂಘಟಿಸಿ ಜಿಲ್ಲಾ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಸ್ತುವಾರಿ ಮಂತ್ರಿಗಳಿಂದ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.ಇವರ ಕರ್ತವ್ಯ ಪರತೆ ಸೇವಾ ಮನೋಭಾವನೆ ಕುರಿತು ರಾಷ್ಟ್ರೀಯ ಶಿಕ್ಷಕ ಭೂಷಣ ಪ್ರಶಸ್ತಿ ಸಿರಿಗನ್ನಡ ವೇದಿಕೆ ಬೆಂಗಳೂರುರವರು ಜನನಾಯಕ ಪ್ರಶಸ್ತಿ ನೀಡಿ ಗೌರವಿಸಿದಲ್ಲದೇ ತಾಲೂಕು ಜಲ್ಲಾ ವಿವಿಧ ಸಂಘ ಸಂಸ್ಥೆಯವರು ಸನ್ಮಾನಿಸಿ. ಸಾರ್ವಜನಿಕರಿಂದ ಸೈ ಎನಿಸಿಕೊಂಡ ರಾಜ್ಯಮಟ್ಟದ ಆದರ್ಶ ಶಿಕ್ಷಕರಾಗಿದ್ದಾರೆ.
ಈ ಪ್ರಶಸ್ತಿಗೆ ಭಾಜನರಾದ ಇವರನ್ನು ಅನೇಕರು ಅಭಿನಂದಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading