



23-9-2022. ಶುಕ್ರವಾರ.
ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘದ (ಎಲ್.ಎಸ್.ಎಂ.ಪಿ.) 72ನೇ ವಾರ್ಷಿಕ ಮಹಾಸಭೆಯು ಸಂಘದ ಆವಾರದಲ್ಲಿ ಶುಕ್ರವಾರ ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷ ನಾಗರಾಜ ಕವಡಿಕೆರೆ ಮಾತನಾಡಿ, ಸದಸ್ಯರ ಹಾಗೂ ಎಲ್ಲರ ಸಹಕಾರದಿಂದ ಈ ಸೊಸೈಟಿಯು ಲಾಭದಲ್ಲಿ ಮುನ್ನೆಡೆದಿದೆ. ಕಳೆದ ಸಾಲಿನಲ್ಲಿ ಸೊಸೈಟಿಯು 35.36 ಲಕ್ಷ ರೂ ಲಾಭಗಳಿಸಿದೆ. ನಂದೊಳ್ಳಿ ಹಾಗೂ ಉಪ್ಪಳೇಶ್ವರದ ಸೊಸೈಟಿಯ ಶಾಖೆಗಳು ಲಾಭದಲ್ಲಿವೆ.

ಎ.ಟಿ.ಎಂ. ವ್ಯವಸ್ಥೆ, ನೆಟ್ ಬ್ಯಾಂಕಿAಗ್, ಬಾಂಡ್ ಪೇಪರ್ ವ್ಯವಸ್ಥೆ ಮುಂತಾದ ಹತ್ತು ಹಲವಾರು ರೀತಿಯಲ್ಲಿ ಸದಸ್ಯರಿಗೆ, ಕೃಷಿಕರಿಗೆ ಅನುಕೂಲತೆ ಮಾಡಿಕೊಡುತ್ತಿದ್ದೇವೆ. ಆಪತ್ ಠೇವು, ಕಿರಾಣಿ ಸಾಮಗ್ರಿ ಪೂರೈಕೆ, ಪಶುಆಹಾರ ಪೂರೈಕೆ ಮಾಡುತ್ತಿದ್ದೇವೆ. ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕ್ರತಜ್ಞತೆ ಸಲ್ಲಿಸುತ್ತೇನೆ ಎಂದರು.

ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ನಿರ್ದೇಶಕರಾದ ನರಸಿಂಹ ಕೋಣೆಮನೆ, ಆರ್.ಎಸ್.ಭಟ್ಟ, ತಿಮ್ಮಣ್ಣ ಭಟ್ಟ ಘಟ್ಟಿ, ಸುಬ್ರಾಯ ಭಟ್ಟ, ಅಪ್ಪು ಆಚಾರಿ, ಮಹಾಬಲೇಶ್ವರ ಗುಮ್ಮಾನಿ, ಸುಜಾತಾ ಹೆಬ್ಬಾರ್, ರಾಮಾ ಸಿದ್ದಿ, ಟಿ.ಎಂ.ಎಸ್.ನಿರ್ದೇಶಕ ವೆಂಕಟ್ರಮಣ ಭಟ್ ಕಿರಕುಂಭತ್ತಿ ಮುಂತಾದವರು ಇದ್ದರು. ಸುಬ್ರಾಯ ಭಟ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್.ಹೆಗಡೆ ವಾರ್ಷಿಕ ವರದಿ ವಾಚಿಸಿ, ನಿರ್ವಹಿಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ facebook group – https://www.facebook.com/groups/593852164946589/ join ಆಗಿ






