22 – 9 – 2022.. ಗುರುವಾರ.

ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘಕ್ಕೆ (ಎಲ್.ಎಸ್.ಎಂ.ಪಿ.) 2021-22 ನೇ ಸಾಲಿನಲ್ಲಿ 35,36,323 ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ನಾಗರಾಜ ಕವಡೀಕೆರೆ ಹೇಳಿದರು.

ಈ ಸುದ್ದಿಯ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.


ಗುರುವಾರ ಅವರು ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸದಸ್ಯರಿಗೆ ಶೇ.7 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಸಂಘದ ಉಪ್ಪಳೇಶ್ವರ ಹಾಗೂ ನಂದೊಳ್ಳಿ ಶಾಖೆಗಳೂ ಲಾಭದಲ್ಲಿ ಇವೆ. ಸಂಘದಲ್ಲಿ ಕೋರ್ ಬ್ಯಾಂಕಿಂಗ್, ಎ.ಟಿ.ಎಂ, ಬಾಂಡ್ ಪೇಪರ್ ಮಾರಾಟ ಹಾಗೂ ಶಾಖೆಗಳಲ್ಲಿ ರೇಶನ್,ಪಶುಆಹಾರ,ಕಿರಾಣಿ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಕೃಷಿಕರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸದಸ್ಯರಿಗೆ ಅವಗಢ ಸಂಭವಿಸಿದರೆ ನೆರವಾಗಲು ಆಪತ್ ಠೇವು, ಅಂತ್ಯಸಂಸ್ಕಾರ ನಿಧಿ, ಆರೋಗ್ಯ ಸೇವಾ ಸೌಲಭ್ಯ ಕಲ್ಪಿಸಲಾಗಿದೆ.

ಈ ವರ್ಷ ಸಂಘದ ವತಿಯಿಂದ ಟಿ.ಎಂ.ಎಸ್.ನಲ್ಲಿ 2276 ಕ್ವಿಂಟಾಲ್ ಅಡಕೆ ವ್ಯವಹಾರ ನಡೆಸಿ ಪುರಸ್ಕಾರ ಪಡೆದಿದ್ದೇವೆ. ಸಂಘದ ಪ್ರಗತಿಗೆ ಸಹಕರಿಸಿದ ಎಲ್ಲರಿಗೂ ಕ್ರತಜ್ಞತೆಗಳು ಎಂದರು.
ನಿರ್ದೇಶಕರಾದ ತಿಮ್ಮಣ್ಣ ಘಟ್ಟಿ, ಮಹಾಬಲೇಶ್ವರ ಗುಮ್ಮಾನಿ, ಸುಬ್ರಾಯ ಭಟ್ಟ, ಅಪ್ಪು ಆಚಾರಿ, ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್.ಹೆಗಡೆ ಇದ್ದರು.

One thought on “L.S.M.P. ಸೊಸೈಟಿಗೆ 35.36 ಲಕ್ಷ ರೂ ನಿವ್ವಳ ಲಾಭ : ನಾಗರಾಜ ಕವಡೀಕೆರೆ.”

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading