28-9-2022. ಬುಧವಾರ.

ತಾಲೂಕಿನ ಮಳಲಗಾಂವ್ ಸರಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ,ಸೇವಾಸ್ಪೂರ್ತಿ ಸೇವಾದಳಶಾಖೆ ಇವುಗಳ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ, ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು,ರಂಗೋಲಿ ಸ್ಪರ್ಧೆ ನಡೆಯಿತು.ಬಿ.ಆರ್.ಪಿ ಸಂತೋಷ ಜಗಳೂರ್ ಕಾರ್ಯಕ್ರಮ ಉಧ್ಘಾಟಿಸಿ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಪೋಷಕಾಂಶ ಆಹಾರಗಳ ಬಗ್ಗೆ ತಿಳುವಳಿಕೆ ನೀಡಿ ಆರೋಗ್ಯವಂತ ಮಕ್ಕಳು ನಮ್ಮ ಆಸ್ಥಿಯಾಗುವಂತೆ ಮಾಡುವ ಉಧ್ದೇಶ ಈ ಪೋಷಣಾ ಅಭಿಯಾನದ್ದಾಗಿದೆ ಎಂದರು. ಸಿ.ಆರ್.ಪಿ ಹಾಗೂ ಸೇವಾದಳದ ಪ್ರಮುಖ ಸಂಜೀವಕುಮಾರ್ ಹೊಸ್ಕೇರಿ ಮಾತನಾಡಿ,ಭೌತಿಕ ಪ್ರಗತಿಯೊಂದಿಗೆ ಶೈಕ್ಷಣಿಕ ಪ್ರಗತಿಯೂ ಕಾಣಬೇಕು.ಇದು ಈ ಶಾಲೆಯಲ್ಲಿ ಕಾಣುತ್ತಿದೆ ಎಂದರು.

ಗ್ರಾ.ಪಂ ಸದಸ್ಯ ಆರ್.ಎಸ್.ಭಟ್ಟ ಪುಸ್ತಕ ಶೇಖರಣೆಯ ಚಿಣ್ಣರ ಬ್ಯಾಂಕ್ ಉಧ್ಘಾಟಿಸಿ ಮಾತನಾಡಿದರು. ಮಳಲಗಾಂವ್ ಕ್ಲಸ್ಟರ್ ಸಿ.ಆರ್.ಪಿ ಕೆ.ಆರ್.ನಾಯ್ಕ್,ಉಮ್ಮಚಗಿ ಕುಂದರಗಿ ಕ್ಲಸ್ಟರ್ ಸಿ.ಆರ್.ಪಿ ವಿಷ್ಣು ಭಟ್ಟ,ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶ್ರೀಕಾಂತ ಭಾಗ್ವತ್,ಅಂಗನವಾಡಿ ಸಹಾಯಕಿ ವಿಜಯಾ ಭಾಗ್ವತ್,ಆರೋಗ್ಯ ಸಹಾಯಕಿ ವೇದಾ ನಾಯ್ಕ್, ಆಶಾ ಕಾರ್ಯಕರ್ತೆ ನಾಗವೇಣಿ ಅಗೇರ್, ನರಸಿಂಹ ಸಾತೊಡ್ಡಿ ಉಪಸ್ಥಿತರಿದ್ದರು.ಕಾವೇರಿ ಮಳಲಗಾಂವ್ ಸಾರ್ವಜನಿಕರ ಪರವಾಗಿ ಮಾತನಾಡಿದರು.

ಎಸ್.ಡಿ.ಎಂ.ಸಿಅಧ್ಯಕ್ಷ ಮಹೇಶ ಭಾಗ್ವತ ಗಾಣಗದ್ದೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧ್ಯಾರ್ಥಿಗಳು ನೃತ್ಯದ ಮೂಲಕ ಪ್ರಾರ್ಥಿಸಿದರು.ಶಿಕ್ಷಕಿ ಲತಾ ತಳೇಕರ್ ಸ್ವಾಗತಿಸಿದರು.ಸಹಶಿಕ್ಷಕ ರಾಘವೇಂದ್ರ ಹೊನ್ನಾವರ ಕಾರ್ಯಕ್ರಮ ನಿರ್ವಹಿಸಿದರು.ಮುಖ್ಯಾಧ್ಯಾಪಕಿ ಸುಜಾತಾ ನಾಯ್ಕ್ ವಂದಿಸಿದರು.ಪೋಷಣಾ ಅಭಿಯಾನದ ನಿಮಿತ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ,ಪಾಲಕರಿಗೆ ರಂಗವಲ್ಲಿ ಸ್ಪರ್ಧೆಗಳು ನಡೆದವು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ facebook group – https://www.facebook.com/groups/593852164946589/ join ಆಗಿ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading