28-10-2022. ಶುಕ್ರವಾರ.

ಇತ್ತೀಚೆಗೆ ನಿಧನರಾದ ವಿದ್ವಾಂಸ, ಸಾಹಿತಿ ದಿ.ಪ.ಗ.ಭಟ್ಟ ಗುಡ್ಡೆಯವರಿಗೆ ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ನುಡಿನಮನ ಸಲ್ಲಿಸಲಾಯಿತು. ಯಲ್ಲಾಪುರ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸರಳ, ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಪ.ಗ.ಭಟ್ಟರು ಧಾರ್ಮಿಕ, ಸಾಹಿತ್ಯ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಿ ಉತ್ತಮ ಹೆಸರು ಪಡೆದಿದಿದ್ದರು. ಅಪಾರ ಅಭಿಮಾನಿಗಳನ್ನೂ ಹೊಂದಿದ ವ್ಯಕ್ತಿ ಅವರಾಗಿದ್ದರು. ಅವರ ನಿಧನದಿಂದ ಸಮಾಜಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದರು.

ಇದನ್ನೂ ನೋಡಿ ; ಯಲ್ಲಾಪುರದಲ್ಲಿ ಯಶಸ್ವಿಯಾಗಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ

VIDEO

ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಜ್ಞಾನದ ಪರ್ವತವೇ ಆಗಿದ್ದ ಪ.ಗ.ಭಟ್ಟರು ವಿಶಾಲ ಮನೋಭಾವನೆಯನ್ನು ಹೊಂದಿ, ಸದಾ ಮಾರ್ಗದರ್ಶಕರಾಗಿದ್ದರು ಎಂದು ಪ.ಗ.ಭಟ್ಟರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಸುಬ್ರಹ್ಮಣ್ಯ ಭಟ್, ನಿವೃತ್ತ ತಹಸೀಲ್ದಾರ್ ಡಿ.ಜಿ.ಹೆಗಡೆ,

ಭಾರತ ಸೇವಾದಳದ ತಾಲೂಕಾ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಮುಂತಾದವರು ನುಡಿನಮನ ಸಲ್ಲಿಸಿದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖರಾದ ಡಿ.ಎನ್.ಗಾಂವ್ಕಾರ್, ಜಿ.ಎನ್.ಭಟ್ ತಟ್ಟಿಗದ್ದೆ, ಕಾರ್ಯದರ್ಶಿಗಳಾದ ಸಂಜೀವಕುಮಾರ ಹೊಸ್ಕೇರಿ, ಶ್ರೀಧರ ಅಣಲಗಾರ್, ಪ್ರಮುಖರಾದ ಉಲ್ಲಾಸ ಶಾನಭಾಗ, ಬಿ.ಜಿ.ಹೆಗಡೆ ಗೇರಾಳ, ಪ್ರಕಾಶ ನಾಯಕ, ನಾರಾಯಣ ನಾಯಕ, ಕೃಷ್ಣ ಭಟ್ಟ ನಾಯಕನಕೆರೆ,ಟಿ.ವಿ.ಕೋಮಾರ , ಸುಬ್ರಾಯ ಬಿದ್ರೆಮನೆ ಮುಂತಾದವರು ಪಾಲ್ಗೊಂಡಿದ್ದರು. ಕಸಾಪ ಸದಸ್ಯರು, ಪ.ಗ.ಭಟ್ಟ ಗುಡ್ಡೆಯವರ ಅಭಿಮಾನಿಗಳು ಇದ್ದರು. ದಿ.ಪ.ಗ.ಭಟ್ಟರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ನಡೆಸಲಾಯಿತು.

ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಒತ್ತಿ. ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ.

https://youtube.com/channel/UCl9HLpwN7rGV0dyzYruwkFw

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ facebook group – https://www.facebook.com/groups/593852164946589/ join ಆಗಿ

One thought on “<strong>ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿ. ಪ.ಗ.ಭಟ್ಟ ಗುಡ್ಡೆಯವರಿಗೆ ನುಡಿನಮನ</strong>”

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading