ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಹರಿಪ್ರಕಾಶ ಕೋಣೆಮನೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸರ್ಕಾರದ ಹಗರಣಗಳ ಪಟ್ಟಿ ಬೆಳೆಯುತ್ತಲೇ ಇದೆ. ಬಡವರ ಮನೆ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಜನರಿಗೆ ಆಗುತ್ತಿರುವ ಸಮಸ್ಯೆ ಹಾಗೂ ಪ್ರತಿ ಮನೆ ಮನೆಗೂ ಕಾಂಗ್ರೆಸ್ ಪಕ್ಷದ ಆಡಳಿತದ ಸೋಲನ್ನು ಮನದಟ್ಟು ಮಾಡಲು ನಮ್ಮ ಮನೆ ನಮ್ಮ ಹಕ್ಕು ಜನಾಂದೋಲನ ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಸೋಮವಾರ ತಾಲೂಕಿನ ವಜ್ರಳ್ಳಿಯಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಜನಜಾಗೃತಿ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಭ್ರಷ್ಟಾಚಾರದಿಂದ ನಲುಗಿ ಹೋಗಿದೆ, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾದ ಆಡಳಿತದಿಂದ ಜನತೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರದ ಯಾವ ಯೋಜನೆಗಳು ಜನಸಾಮಾನ್ಯರಿಗ ತಲುಪುತ್ತಿಲ್ಲ. ಕಾಂಗ್ರೆಸ್ ಪಕ್ಷದ ದುರಾಡಳಿತ ಜನಸಾಮಾನ್ಯರಿಗೆ ಕಂಟಕವಾಗಿ ಪರಿಣಮಿಸಿದೆ.
ನಿವೇಶನಗಳ ಮೇಲಿನ ಹಕ್ಕು ಕಸಿದುಕೊಳ್ಳುವ ದಾಖಲೆಗಳನ್ನು ನಾಶ ಮಾಡುವ ಇಂತಹ ಸರ್ಕಾರದ ನಡವಳಿಕೆಯನ್ನು ಇನ್ನು ಸಹಿಸಲಾಗದು. ಗ್ಯಾರಂಟಿ ಘೋಷಿಸಿ ಅಭಿವೃದ್ಧಿಯ ಅನುದಾನ ಕಡಿತ ಮಾಡುವುದರ ಹಿಂದೆ ದಿವಾಳಿತನ ಎದ್ದು ತೋರಿಸುತ್ತದೆ. ಪಂಚಾಯತಿ ಮಟ್ಟದಲ್ಲೂ ಭೃಷ್ಟಾಚಾರ ನಡೆಯುತ್ತಿದೆ.
ಕರ್ನಾಟಕದಿಂದ ಕಾಂಗ್ರೆಸ್ ಪಕ್ಷ ಕಿತ್ತೊಗೆಯುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.
ಸಭೆಯಲ್ಲಿಪಕ್ಷದ ಪ್ರಮುಖರಾದ ಉಮೇಶ ಭಾಗ್ವತ, ವಿ ಎನ್ ಭಟ್ಟ ಬೆಳ್ಳಿ, ದತ್ತಾತ್ರೇಯ ಭಟ್ಟ ತಾರಗಾರ, ಸುಬ್ಬಣ್ಣ ಬೋಳ್ಮನೆ,ನವೀನ್ ಕಿರಗಾರೆ, ಆರ್ ಟಿ ಭಟ್ಟ, ಶ್ರೀಕಾಂತ ಹೆಬ್ಬಾರ್, ಸೇರಿದಂತೆ ಪಕ್ಷದ ಸ್ಥಳೀಯ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ವಜ್ರಳ್ಳಿ ಮಂಡಲದ ಅಧ್ಯಕ್ಷ ಮಹೇಶ ಗಾಂವ್ಕರ ನಿರ್ವಹಿಸಿದರು.