16-4-2022. ಶನಿವಾರ.

E-YELLAPUR.COM NEWS ಯಲ್ಲಾಪುರ

ಯಲ್ಲಾಪುರ ತಾಲೂಕಿನ ನಂದೊಳ್ಳಿಯ ಶ್ರೀರಾಮಲಿಂಗೇಶ್ವರ ನಾಟಕ ನಾಟ್ಯ ಕಲಾ ಬಳಗದ ಆಶೃಯದಲ್ಲಿ ಶುಕ್ರವಾರ ರಾತ್ರಿ ರಕ್ತಕಂಡ ರಣಧೀರ (ತಂಗಿಯ ಕಣ್ಣೀರು) ನಾಟಕ ಪ್ರದರ್ಶನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಭವ್ಯ ರಂಗಸಜ್ಜಿಕೆ ಹಾಗೂ ಹವ್ಯಾಸಿ ಕಲಾವಿದರ ಉತ್ತಮ ಅಭಿನಯದಿಂದ ಯಶಸ್ವಿಯಾದ ಈ ನಾಟಕ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.

ADVT

ಕಾರ್ಯಕ್ರಮವನ್ನು ಹಿರಿಯರಾದ ಗಣಪತಿ ಭಟ್ಟ ಗೇರಗದ್ದೆ ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಟಕ ಕಲಾವಿದರಾದ ವೇ.ಮಹಾಬಲೇಶ್ವರ ಭಟ್ಟ ನೇರಲಮನೆ, ಮಾದೇವ ನಾಯ್ಕ ಕೊಲ್ಲಕ್ಕಿಪಾಲ, ನಿವೃತ್ತ ಯೋಧ ಸುಬ್ರಹ್ಮಣ್ಯ ಭಟ್ಟ ಕರಡಿಪಾಲ, ಸಮಾಜ ಸೇವಕ ವೆಂಕಟರಮಣ ಕೊಡಿಯಾ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಶುಭ ಹಾರೈಸಿದರು. ಟಿ.ಎಂ.ಎಸ್. ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ, ಶ್ರೀಗುರು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಜಯರಾಮ ಭಟ್ಟ ಮಾತನಾಡಿದರು.

ADVT

ವೇದಿಕೆಯಲ್ಲಿ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ನಂದಾ ನಾಯ್ಕ ಕಾರವಾರ, ಗ್ರಾ.ಪಂ.ಉಪಾಧ್ಯಕ್ಷೆ ಮೀನಾಕ್ಷಿ ಭಟ್ಟ, ಸದಸ್ಯೆ ನಾಗರತ್ನಾ ನಾಯ್ಕ,ಎಸ್.ಡಿ.ಎಂ.ಸಿ.ಅಧ್ಯಕ್ಷ ವಿನಾಯಕ ನಂದೊಳ್ಳಿ ಮುಂತಾದವರು ಇದ್ದರು.

ಗ್ರಾ.ಪಂ.ಸದಸ್ಯ ಟಿ.ಆರ್.ಹೆಗಡೆ ತೊಂಡೆಕೆರೆ, ರವೀಂದ್ರ ಭಟ್ಟ,ನರಸಿಂಹ ಭಟ್ಟ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಂ.ಎನ್.ಭಟ್ಟ ಸನ್ಮಾನಿತರನ್ನು ಪರಿಚಯಿಸಿದರು. ಕಲಾ ಬಳಗದ ಅಧ್ಯಕ್ಷ ನಾಗರಾಜ ಕೌಡಿಕೆರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಪ್ರಮುಖ ಶಿವಾನಂದ ನಾಯ್ಕ ನಿರ್ವಹಿಸಿದರು.

ಟಿ.ಎಂ.ಎಸ್.ನಿರ್ದೇಶಕ ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ ವಂದಿಸಿದರು. ದತ್ತಾತ್ರೇಯ ಹೆಗಡೆ, ಮಂಜುನಾಥ ನಾಯ್ಕ, ನರಸಿಂಹ ಭಟ್ಟ , ಗಣಪತಿ ಭಟ್ಟ ಕರಡಿಪಾಲ,

ADVT

ಶಿವಾನಂದ ನಾಯ್ಕ, ಸುಬ್ಬಣ್ಣ ಕಂಚಗಲ್, ಸುದರ್ಶನ ಭಾಗ್ವತ, ಮಾದೇವ ನಾಯ್ಕ, ಸುಬ್ರಾಯ ಕೋಡ್ನಗುಡ್ಡೆ, ಶ್ರೀಧರ ಅಣಲಗಾರ, ಗಣಪತಿ ಪಟಗಾರ, ಸುದರ್ಶನ ದೇವಿತಗ್ಗು, ಶಿವಾ ಸಿದ್ದಿ ಪಾತ್ರ ನಿರ್ವಹಿಸಿದರು.

==========

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading