17-4-2022. ರವಿವಾರ.

E-YELLAPUR.COM NEWS ಯಲ್ಲಾಪುರ.

ಯಕ್ಷಗಾನದ ಖ್ಯಾತ ಭಾಗವತರಾದ ವಿದ್ವಾನ್ ಗಣಪತಿ ಭಟ್ಟ ಮೊಟ್ಡೆಗದ್ದೆಯವರು ರಚಿಸಿದ ಯಕ್ಷಗಾನ ಗಾನಸಂಹಿತೆ ಗ್ರಂಥವನ್ನು ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ರವಿವಾರ ಸಂಜೆ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯದ ಸಭಾಭವನದಲ್ಲಿ ಲೋಕಾರ್ಪಣೆಗೊಳಿಸಿದರು.

ನಂತರ ಆಶೀರ್ವಚನ ನೀಡಿದ ಅವರು, ಯಕ್ಷಗಾನವು ಶಾಸ್ತ್ರೀಯವಾದ ಕಲೆಯಾಗಿದೆ. ಯಕ್ಷಗಾನದ ಗಾನದ ಚೌಕಟ್ಟಿನಲ್ಲಿ ಸಮಗ್ರ ಮಾಹಿತಿ ಒದಗಿಸುವ ಈ ಗ್ರಂಥವನ್ನು ವಿ.ಗಣಪತಿ ಭಟ್ಟ ಅವರು ಸಮರ್ಥವಾಗಿ ರಚಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಗ್ರಂಥವನ್ನು ಪರಿಚಯಿಸಿ ಅರ್ಥಧಾರಿ ವಿ.ಉಮಾಕಾಂತ ಭಟ್ಟ ಮಾತನಾಡಿ ಈ ಗ್ರಂಥವು ಯಕ್ಷಗಾನ ಪ್ರಪಂಚಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದರು.

ADVT

ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಯಕ್ಷಗಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದೊಂದು ಮಹತ್ವಪೂರ್ಣ ಕೃತಿಯಾಗಿದೆ ಎಂದರು.

ಉಪಸ್ಥಿತರಿದ್ದ ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಶಾರದಾಂಬಾ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಅರ್ಥಧಾರಿ ಎಂ.ಎನ್.ಹೆಗಡೆ ಹಳವಳ್ಳಿ ಮಾತನಾಡಿದರು.

ವಿ.ಗಣಪತಿ ಭಟ್ಟ ಮೊಟ್ಟೆಗದ್ದೆ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹಾಬಲೇಶ್ವರ ಭಟ್ಟ ಕುರುಕುಂಭತ್ತಿ ನಿರ್ವಹಿಸಿದರು.ಡಾ.ಶಂಕರ ಭಟ್ಟ ಬಾಲಿಗದ್ದೆ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೆಂಗಳೂರಿನ ಪ್ರಮದಾ ಉಪಾಧ್ಯಾಯ ಅವರಿಂದ ಕಥಕ್ ನೃತ್ಯ ನಡೆಯಿತು. ನಂತರ ನಡೆದ ಯಕ್ಷರಾಗ ರಸ ರಂಜನಿ ಹಿಮ್ಮೇಳ ವೈಭವ ಕಾರ್ಯಕ್ರಮದಲ್ಲಿ

ಭಾಗವತರಾಗಿ ವಿ.ಗಣಪತಿ ಭಟ್ಟ ಮೊಟ್ಟೆಗದ್ದೆ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಮೃದಂಗವಾದಕರಾಗಿ ಶಂಕರ ಭಾಗ್ವತ್ ಶಿಸ್ತಮುಡಿ ,ಗಣಪತಿ ಭಾಗ್ವತ ಕವಾಳೆ, ಚಂಡೆವಾದಕರಾಗಿ ಗಣೇಶ ಗಾಂವ್ಕಾರ್ ಪಾಲ್ಗೊಂಡಿದ್ದರು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading