5-8-2022. ಶುಕ್ರವಾರ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದ ವತಿಯಿಂದ ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ಶುಕ್ರವಾರ ಯಲ್ಲಾಪುರ-ಮುಂಡಗೋಡ ತಾಲೂಕುಗಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ ಹಾಗೂ ಸ್ವಯಂ ಸೇವಕರಿಗೆ ಜೀವರಕ್ಷಣಾ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು.

ಈ ಸುದ್ದಿಯ ವೀಡಿಯೋ ದೃಶ್ಯಾವಳಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ.

ಈ ಕಾರ್ಯಾಗಾರವನ್ನು ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಿ.ಎನ್.ಗಾಂವ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ,ಉಷಾ ಫೈರ್ ಸೇಫ್ಟಿ ಸಂಸ್ಥೆಯ ಅಧ್ಯಕ್ಷ ಕೆ.ಜಗದೀಶ ಅಡಪ, ಜೈವಂತ ಪಟಗಾರ ಭಾಗವಹಿಸಿದ್ದರು. ಯೋಜನಾಧಿಕಾರಿ ಹನುಮಂತ ನಾಯ್ಕ ಸ್ವಾಗತಿಸಿದರು.

ಪ್ರಮುಖ ಸುದ್ದಿಗಳ ವಿಡಿಯೋ ವೀಕ್ಷಿಸಲು ಕೆಳಗಿನ E-YELLAPUR DIGITAL NEWS YOTUBE ಲಿಂಕ್ ಅನ್ನು ಕ್ಲಿಕ್ ಮಾಡಿ. SUBSCRIBE ಮಾಡಿ.

https://youtube.com/channel/UCl9HLpwN7rGV0dyzYruwkFw

ಸಂಭ್ರಮದಿಂದ ನಡೆದ ವರಮಹಾಲಕ್ಷ್ಮಿ ಹಬ್ಬ.

ಯಲ್ಲಾಪುರ ತಾಲೂಕಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಈ ನಿಮಿತ್ತ ಶ್ರದ್ಧಾಳುಗಳು ಮನೆಯಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸಿದರು. ವಿವಿಧ ದೇವಾಲಯಗಳಲ್ಲಿಯೂ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು, ಅರಿಶಿನ-ಕುಂಕುಮ, ಬಾಗಿನ ಅರ್ಪಣೆ ಕಾರ್ಯಕ್ರಮಗಳು ನಡೆದವು.

ತಾಲೂಕಿನ ನಂದೊಳ್ಳಿಯ ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ದೇವಾಲಯದಲ್ಲಿ ಈ ನಿಮಿತ್ತ ಶುಕ್ರವಾರ ಅರಿಶಿನ-ಕುಂಕುಮ, ಪೂಜೆ ನಡೆಯಿತು. ಮುತ್ತೈದೆಯರಿಗೆ ಬಾಗಿನ, ಅರಿಶಿನ,ಕುಂಕುಮ ನೀಡಿ ಗೌರವಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯ ಪ್ರಮುಖರಾದ ಶ್ರೀಧರ ಗುಮ್ಮಾನಿ, ಪುರೋಹಿತರಾದ ವೇ.ರಾಮಚಂದ್ರ ಭಟ್ಟ ಪಾಗಾರಮನೆ, ಗ್ರಾಮಸ್ಥರಾದ ಜಿ.ಎನ್.ಭಟ್ ತಟ್ಟಿಗದ್ದೆ ಮುಂತಾದವರು ಇದ್ದರು.

ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಸುಹಾಸಿನಿಯರಿಗೆ ಬಾಗಿನ ಅರ್ಪಿಸಲಾಯಿತು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP –

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading