6-8-2022. ಶನಿವಾರ.

ಕಳೆದ ಅನೇಕ ದಶಕಗಳಿಂದ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ವ್ಯವಹಾರಗಳಿಂದ ಗ್ರಾಹಕರ ಮನಗೆದ್ದ ಯಲ್ಲಾಪುರ ಪಟ್ಟಣದ ಎಂ.ಕೆ.ಭಟ್ & ಕಂಪನಿಯ ಪರಿವಾರದ ವತಿಯಿಂದ ಈಗ ಮತ್ತೊಂದು ಹೊಸ ಉದ್ಯಮ ಪ್ರಾರಂಭವಾಗುತ್ತಿದೆ. ಎಂ.ಕೆ.ಬಿ.ಪರಿವಾರದಿಂದ ನೂತನವಾಗಿ ಮಹಾಲಕ್ಷ್ಮೀ ಸಿಲ್ಕ್ & ಸ್ಯಾರೀಸ್ ಜವಳಿ ಮಳಿಗೆಯನ್ನು ಪ್ರಾರಂಭಿಸಲಾಗುತ್ತಿದ್ದು, ಈ ಮಳಿಗೆಯು ಆ.7 ರವಿವಾರ ಶುಭಾರಂಭಗೊಳ್ಳಲಿದೆ.

ಕಳೆದ ಐದು ದಶಕಗಳಿಂದ ಯಲ್ಲಾಪುರದ ಎಂ.ಕೆ.ಬಿ. ಪರಿವಾರದವರು ವಿವಿಧ ಗ್ರಾಹಕ ಸ್ನೇಹಿ ಉದ್ಯಮಗಳಿಂದ ಜನರ ಮನಗೆದ್ದಿದ್ದಾರೆ. ಮಹಾಲಕ್ಷ್ಮಿ ಸ್ಟೋರ್ಸ ಹಾಗೂ ಮಹಾಲಕ್ಷ್ಮಿ ಸೂಪರ್ ಮಾರ್ಕೆಟ್ ಹೋಲ್ ಸೇಲ್ ಮತ್ತು ರಿಟೇಲ್ ಕಿರಾಣಿ ವಿಭಾಗ, ಎಂ.ಕೆ.ಭಟ್ಟ & ಕಂಪನಿ ಅಡಕೆ ವ್ಯಾಪಾರ ಹಾಗೂ ಇತ್ತೀಚೆಗೆ ಮಹಾಲಕ್ಷ್ಮಿ ಬಿಲ್ಡ್ ಟೆಕ್ ಮತ್ತು ಮಹಾಲಕ್ಷ್ಮಿ ಹೋಂ ಪ್ಲಸ್ ಕಟ್ಟಡ ಸಾಮಗ್ರಿಗಳ ವಿಭಾಗ ಜನರೊಂದಿಗೆ ಬೆರೆತು ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಈ ಎಲ್ಲಾ ವಿಭಾಗಗಳು ಯಲ್ಲಾಪುರ ತಾಲೂಕಿನವರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಜನರ ಮನ ಗೆದ್ದಿವೆ.

ಹೊಸದಾಗಿ ಪ್ರಾರಂಭವಾಗುತ್ತಿರುವ ಮಹಾಲಕ್ಷ್ಮೀ ಸಿಲ್ಕ್ & ಸಾರೀಸ್ ಜವಳಿ ವಿಭಾಗದಲ್ಲಿ ಪ್ರಸಿದ್ಧ ಕಂಪನಿಗಳ, ನವನಾವಿನ್ಯ ಬಗೆಯ ಬಟ್ಟೆಗಳು ವಿಶಾಲ ಶ್ರೇಣಿಗಳಲ್ಲಿ ಲಭ್ಯ ಇವೆ. ಸುಪ್ರಸಿದ್ಧ ಮಗ್ಗಗಳ ರೇಷ್ಮೆ ಸೀರೆಗಳು, ಮಹಿಳೆಯರ ಐಚ್ಛಿಕ ಉಡುಪುಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾದ ವೈದಿಕ ಸಂಪ್ರದಾಯದ ಬಟ್ಟೆಗಳು, ಚಿಕ್ಕಮಕ್ಕಳ ವಿವಿಧ ಬಗೆಯ ಸಿದ್ಧ ಉಡುಪುಗಳು, ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಬೇಕಾದ ಜವಳಿ ಬಟ್ಟೆಗಳು ಭರಪೂರ ಸ್ಟಾಕ್‍ಗಳಲ್ಲಿ ಲಭ್ಯ ಇವೆ.

ವಿಶೇಷ ಪ್ರದರ್ಶನ ಮತ್ತು ರಿಯಾಯಿತಿ ಮಾರಾಟ.

ಮಹಾಲಕ್ಷ್ಮೀ ಸಿಲ್ಕ್ & ಸ್ಯಾರೀಸ್ ಮಳಿಗೆಯ ಶುಭಾರಂಭದ ಕೊಡುಗೆಯ ಅಂಗವಾಗಿ ಮಳಿಗೆಯ ಆವರಣದಲ್ಲಿ ಆ.7 ರವಿವಾರದಿಂದ ಆ.14 ರವಿವಾರದವರೆಗೆ ವೈವಿಧ್ಯಮಯ ಬಟ್ಟೆಗಳ ವಿಶೇಷ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಏರ್ಪಡಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂ.ಕೆ.ಬಿ.ಪರಿವಾರದ ಶ್ರೀಮತಿ ಮತ್ತು ಶ್ರೀ ವಿಶ್ವನಾಥ ಭಟ್, ಶ್ರೀಮತಿ ಮತ್ತು ಶ್ರೀ ಪರಮೇಶ್ವರ ಭಟ್, ಶ್ರೀಮತಿ ಮತ್ತು ಶ್ರೀ ವಿನಾಯಕ ಭಟ್, ಶ್ರೀಮತಿ ಮತ್ತು ಶ್ರೀ ಶಿವಪ್ರಸಾದ ಭಟ್ ಬೆಳಗಾವಿ, ಮಹೇಶ ಭಟ್ ಹಾಗೂ ಬಳಗದವರು ಕೋರಿದ್ದಾರೆ.

ರವಿವಾರ ಬೆಳಿಗ್ಗೆ ಈ ಮಳಿಗೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಶಿವರಾಮ ಹೆಬ್ಬಾರ್ ಅವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್, ಪುತ್ರ ವಿವೇಕ ಹೆಬ್ಬಾರ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಒಮ್ಮೆ ಭೇಟಿ ನೀಡಿ.
ಮಹಾಲಕ್ಷ್ಮೀ ಸಿಲ್ಕ್ & ಸಾರಿಸ್.
ಕೆ.ಬಿ.ರಸ್ತೆ ಯಲ್ಲಾಪುರ.
ಫೋ; 9148711226, 8884138931

=============

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/59385 join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading