7-8-2022. ರವಿವಾರ.

ಅನೇಕ ದಶಕಗಳಿಂದ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ವ್ಯವಹಾರಗಳಿಗೆ ಪ್ರಸಿದ್ಧಿಯಾದ ಯಲ್ಲಾಪುರ ಪಟ್ಟಣದ ಎಂ.ಕೆ.ಬಿ. ಪರಿವಾರದ ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್ ಜವಳಿ ಮಳಿಗೆಯು ರವಿವಾರ ಶುಭಾರಂಭಗೊಂಡಿತು. ವಿವಿಧ ಕ್ಷೇತ್ರಗಳ ಗಣ್ಯರು ದೀಪ ಬೆಳಗುವ ಮೂಲಕ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭಕೋರಿದರು.

ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್ ಜವಳಿ ಮಳಿಗೆಯ ಉದ್ಘಾಟನಾ ಸಮಾರಂಭದ ವೀಡಿಯೋ ದೃಶ್ಯಾವಳಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ.
ಲಿಂಕ್.
https://youtube.com/channel/UCl9HLpwN7rGV0dyzYruwkFw

ಮಳಿಗೆಯ ಉದ್ಘಾಟನಾ ಶುಭ ಸಂದರ್ಭದಲ್ಲಿ ನೂರಾರು ಗ್ರಾಹಕರು, ಎಂ.ಕೆ.ಬಿ. ಪರಿವಾರದ ಹಿತೈಷಿಗಳು, ಬಂಧು-ಮಿತ್ರರು, ಸಾರ್ವಜನಿಕರು ಇದ್ದರು.

ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರನ್ನೂ ಎಂ.ಕೆ.ಬಿ. ಪರಿವಾರದ ಪ್ರಮುಖರಾದ ವಿಶ್ವನಾಥ ಭಟ್, ಪರಮೇಶ್ವರ ಭಟ್, ವಿನಾಯಕ ಭಟ್, ಶಿವಪ್ರಸಾದ ಭಟ್ ಮತ್ತು ಮಹೇಶ ಭಟ್ ಹಾಗೂ ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿ,ಗೌರವಿಸಿದರು.

ಖರೀದಿ ಬಲು ಜೋರು ;

ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್ ಜವಳಿ ಮಳಿಗೆಯ ಉದ್ಘಾಟನಾ ಸಮಾರಂಭದ ನಿಮಿತ್ತ ವೈವಿಧ್ಯಮಯ ಬಟ್ಟೆಗಳ ಪ್ರದರ್ಶನ ಮತ್ತು ರಿಯಾಯಿತಿ ಮಾರಾಟ ಏರ್ಪಡಿಸಲಾಗಿದ್ದು, ಆ.14 ರವಿವಾರದ ವರೆಗೆ ನಡೆಯಲಿದೆ.

ಮಳಿಗೆ ಲೋಕಾರ್ಪಣೆಗೊಳ್ಳುತ್ತಿದ್ದಂತೆ ಗ್ರಾಹಕರು ತಮಗೆ ಬೇಕಾದ ವಿವಿಧ ಬಗೆಯ ಬಟ್ಟೆಗಳನ್ನು ಖರೀದಿಸಿದರು. ಮೊದಲ ದಿನವೇ ಈ ಮಳಿಗೆಯಲ್ಲಿ ಬಟ್ಟೆಗಳ ಭರ್ಜರಿ ಮಾರಾಟ ನಡೆಯುತ್ತಿದೆ. ಮಳಿಗೆಗೆ ಆಗಮಿಸಿದ ನೂರಾರು ಗ್ರಾಹಕರು ತಮಗೆ ಇಷ್ಟವಾದ ವಿವಿಧ ನಮೂನೆಯ ಬಟ್ಟೆಗಳನ್ನು ಖರೀದಿಸಿದರು.

ವಿಶಾಲ ಶ್ರೇಣಿಯ ಬಟ್ಟೆಗಳ ವಿಫುಲ ಸಂಗ್ರಹ.

ಮಹಾಲಕ್ಷ್ಮಿ ಸಿಲ್ಕ್ & ಸಾರಿಸ್ ಜವಳಿ ಮಳಿಗೆಯಲ್ಲಿ ಪ್ರಸಿದ್ಧ ಬ್ರ್ಯಾಂಡ್‍ಗಳ ಅಪ್ಪಟ ರೇಷ್ಮೆ ಸೀರೆಗಳು, ಮಹಿಳೆಯರ ಐಚ್ಛಿಕ ಸಿದ್ಧ ಉಡುಪುಗಳು, ಎಲ್ಲ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾದ ವೈದಿಕ ಸಂಪ್ರದಾಯದ ಬಟ್ಟೆಗಳು, ಚಿಕ್ಕಮಕ್ಕಳ ಆಕರ್ಷಕ ಸಿದ್ಧ ಉಡುಪುಗಳು, ಮದುವೆ ಮುಂತಾದ ಮಂಗಲ ಸಮಾರಂಭಗಳಿಗೆ ಬೇಕಾದ ಜವಳಿ ಬಟ್ಟೆಗಳ ದೊಡ್ಡ ಮಟ್ಟದ ಸಂಗ್ರಹ ಲಭ್ಯವಿದ್ದು,

ಗ್ರಾಹಕರು ಈ ಮಳಿಗೆಗೆ ಭೇಟಿ ನೀಡಿ, ವಿವಿಧ ಬಟ್ಟೆಗಳ ಮಾರಾಟ ಉತ್ಸವದಲ್ಲಿ ಭಾಗವಹಿಸಬೇಕು ಎಂದು ಎಂ.ಕೆ.ಬಿ. ಪರಿವಾರದವರು ಕೋರಿದ್ದಾರೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/59385 join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading