14-9-2022. ಬುಧವಾರ.

ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘವು 2021-22 ನೇ ಸಾಲಿನಲ್ಲಿ 44,52,943 ರೂ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ತಿಳಿಸಿದರು. ಅವರು ಬುಧವಾರ ಯಲ್ಲಾಪುರ ಪಟ್ಟಣದ ಎಪಿಎಂಸಿ ಆವಾರದಲ್ಲಿರುವ ಸಂಘದ ಶಾಖಾ ಆವಾರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,

ಸಹ್ಯಾದ್ರಿ ಸೇವಾ ಸಹಕಾರಿ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಗ್ರಾಹಕರಿಗೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗ್ರಾಹಕರು ನಮ್ಮ ಸಂಘದಲ್ಲಿ ನೇರವಾಗಿ ಅಥವಾ ಸಹಕಾರಿ ಸಂಘಗಳ ಮೂಲಕ ಅಡಕೆ ವಿಕ್ರಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಡಕೆ ದಾಸ್ತಾನಿಗಾಗಿ ಇನ್ನೂ 2 ಗೋಡೌನ್‍ಗಳನ್ನು ಪ್ರಾರಂಭಿಸುವ ಯೋಜನೆ ಇದೆ.

ಮಹಸೂಲುಗಳನ್ನು ತಂದ ರೈತರಿಗೆ ಎಲ್ಲ ಅನುಕೂಲತೆ ಕಲ್ಪಿಸಲಾಗಿದೆ. ಸಂಘದ ಸ್ವಂತ ಜಾಗದಲ್ಲಿ ಕೊಬ್ಬರಿ ಎಣ್ಣೆ ಯಂತ್ರ ಹಾಗೂ ಹಿಟ್ಟಿನ ಗಿರಣಿ ಯಂತ್ರವನ್ನು ಪ್ರಾರಂಭಿಸಲಾಗಿದೆ. ರಿಯಾಯಿತಿ ದರದಲ್ಲಿ ಚಾಲಿ ಅಡಕೆ ಸುಲಿಯುವ ಯಂತ್ರದ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲರೂ ಈ ಸೌಲಭ್ಯಗಳ ಸೌಲಭ್ಯಗಳನ್ನು ಪಡೆಯಬೇಕು ಎಂದು ವಿನಂತಿಸಿದ ಅವರು, ಸೆ.19ಕ್ಕೆ ಸಂಘದ ವಾರ್ಷಿಕ ಮಹಾಸಭೆಯು ನಡೆಯಲಿದೆ ಎಂದರು.

ಸಂಘದ ಉಪಾಧ್ಯಕ್ಷ ಜಿ.ಸಿ.ಭಟ್ಟ, ನಿರ್ದೇಶಕರಾದ ರಾಘವೇಂದ್ರ ಭಟ್ಟ,ಸೀತಾ ಹೆಗಡೆ,ರಾಮಕೃಷ್ಣ ಹೆಗಡೆ, ಕಾಶೀನಾಥ ಕಳಸ,ಕುಪ್ಪಾ ಗೌಡ, ಮುಖ್ಯ ಕಾರ್ಯನಿರ್ವಾಹಕ ಡಿ.ಎಂ. ಹೆಗಡೆ ಮುಂತಾದವರು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading