

14-9-2022. ಬುಧವಾರ.
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಯಲ್ಲಾಪುರ ಪಟ್ಟಣದ ವಾಯ್.ಟಿ.ಎಸ್.ಎಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕನ್ನಡ ಕಂಠಪಾಠದಲ್ಲಿ ಸಾನಿಕಾ ನಾಯ್ಕ ಪ್ರಥಮ, ಭಕ್ತಿಗೀತೆಯಲ್ಲಿ ನೀರಜಾ ನಾಯಕ ಪ್ರಥಮ, ಅಭಿನಯ ಗೀತೆಯಲ್ಲಿ ವನಶ್ರೀ ಮಂಗ್ಲಿ ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ ರೇಹಾನ ಕೊಂಡು ಪ್ರಥಮ, ಚಿತ್ರಕಲೆ ಜೀವನ ಪಟಗಾರ ಪ್ರಥಮ, ಕ್ಲೇ ಮಾಡಲಿಂಗ ಮನೀಶ ನಾಯ್ಕ ದ್ವಿತೀಯ, ಆಶುಭಾಷಣದಲ್ಲಿ ಆರ್ ವೈಷ್ಣವಿ ತೃತೀಯ. ಇಂಗ್ಲೀಷ ಕಂಠಪಾಠ ಆದ್ಯಾ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಂಸ್ಕøತ ಧಾರ್ಮಿಕ ಪಠಣ ಭಾರ್ಗವಿ ಹೆಗಡೆ ಪ್ರಥಮ, ಅಭಿನಯ ಗೀತೆ ಶ್ರೀಪ್ರಭಾ ಭಾಗ್ವತ ಪ್ರಥಮ, ಭಾಷಣ ಸ್ಪರ್ಧೆ ನಿರೀಕ್ಷಾ ನಾಯಕ ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ ನೂರ್ ಖಲಂಧರ ಕೊಂಡು ದ್ವಿತೀಯ, ಕನ್ನಡ ಕಂಠಪಾಠ ಜಾಹ್ನವಿ ಹೆಗಡೆ ತೃತೀಯ, ಭಕ್ತಿಗೀತೆ ಶ್ರೀನಿಧಿ ಭಟ್ಟ ತೃತೀಯ, ಕಥೆ ಹೇಳುವುದು ಸಮನ್ವಿ ನಾಯಕ ತೃತೀಯ, ಛದ್ಮವೇಷದಲ್ಲಿ ರಾಮಕೃಷ್ಣ ನಾಯ್ಕ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಪ್ರೌಢ ಶಾಲಾ ವಿಭಾಗದಲ್ಲಿ ಕನ್ನಡ ಭಾಷಣ ಧನ್ಯ ಪಾಲನಕರ ಪ್ರಥಮ, ಜನಪದ ಗೀತೆ ಸ್ಮೀತಾ ಮಾಪ್ಸೇಕರ ಪ್ರಥಮ, ಭರತನಾಟ್ಯ ಸ್ವರ್ಣ ಕೆ ಪ್ರಥಮ, ಮಿಮಿಕ್ರಿ ಜಿತ್ತು ಫೆರೆರಾ ಪ್ರಥಮ, ಕವ್ವಾಲಿ ಮಾಹಿನ ಸಂಗಡಿಗರು ಪ್ರಥಮ, ಇಂಗ್ಲೀಷ ಭಾಷಣ ಸೃಷ್ಠಿ ಕುರಿ ದ್ವಿತೀಯ, ಹಿಂದಿ ಭಾಷಣ ರವೀನಾ ಭಾಟಿ ದ್ವಿತೀಯ, ಅರೇಬಿಕ್ ಧಾರ್ಮಿಕ ಪಠಣ ಅನಾಬಿಯಾ ಶೇಖ ದ್ವಿತೀಯ, ಛದ್ಮವೇಷದಲ್ಲಿ ಭವಿಕ ನಾಯಕ ದ್ವಿತೀಯ, ಚಿತ್ರಕಲೆ ಶ್ರೀಯಾ ರಾಯ್ಕರ ದ್ವಿತೀಯ, ಗಝಲ್ ರುಕಯ್ಯಾ ಶೇಖ ದ್ವಿತೀಯ, ಜನಪದ ನೃತ್ಯ ಶ್ರಾವ್ಯಾ ಸಂಗಡಿಗರು ದ್ವಿತೀಯ, ಕ್ವಿಜ್ ಪ್ರಿಯಾಂಕಾ ಮತ್ತು ಸಂಗಡಿಗರು ದ್ವಿತೀಯ, ರಂಗೋಲಿ ಭವಾನಿ ಎಲ್. ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರವಿಕುಮಾರ ಲಕ್ಷ್ಮಣ ಶಾನಭಾಗ, ಉಪಾಧ್ಯಕ್ಷ ಪ್ರಸನ್ನ ಗುಡಿಗಾರ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಬಿ ಭಟ್ಟ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಪ್ರಾಂಶುಪಾಲರಾದ ವಾಣಿಶ್ರೀ ಹೆಗಡೆ, ಮುಖ್ಯೋಪಾಧ್ಯಾಯರಾದ ಶೈಲಜಾ ಮಾಪ್ಸೇಕರ ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/ join ಆಗಿ















[…] […]