ಅಂಗಾರಕ ಸಂಕಷ್ಟಿಯ ನಿಮಿತ್ತ ಮಂಗಳವಾರ ಯಲ್ಲಾಪುರ ತಾಲೂಕಿನ ಪ್ರಸಿದ್ಧ ಸುಕ್ಷೇತ್ರವಾದ ಚಂದಗುಳಿಯ ಘಂಟೆಗಣಪತಿ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನರು ದೇವಾಲಯಕ್ಕೆ ಆಗಮಿಸಿ ಘಂಟೆಗಣಪತಿಯ ದರ್ಶನ ಪಡೆದು ನಾನಾ ಸೇವೆಗಳನ್ನು ಸಮರ್ಪಿಸಿದರು.
ಶ್ರೀದೇವರಿಗೆ ದೂರ್ವಾರ್ಚನೆ ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಪಂಚಖಾದ್ಯ ಸಮರ್ಪಣೆ, ಹರಕೆ ಘಂಟೆಗಳನ್ನು ಸಮರ್ಪಣೆ ನಡೆಸಿದರು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಯಲ್ಲಾಪುರ ಪಟ್ಟಣದ ಬಾಳಗಿಮನೆ ಶಾಲೆಯ ವಿದ್ಯಾರ್ಥಿ ನಂದನ ಗೇರಗದ್ದೆ ತಾಲೂಕಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾನೆ.