


ಮಳೆ,ಗಾಳಿಯ ಆರ್ಭಟಕ್ಕೆ ಕುಸಿದುಬಿದ್ದ ಕೊಟ್ಟಿಗೆ

ಜೋರಾಗಿ ಸುರಿದ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಯಿಂದ ಕೊಟ್ಟಿಗೆಯೊಂದು ಕುಸಿದು ಬಿದ್ದಿರುವ ಘಟನೆ ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಜಡ್ಡಿಗದ್ದೆಯಲ್ಲಿ ನಡೆದಿದೆ.

ಜಡ್ಡಿಗದ್ದೆಯ ನರಸಿಂಹ ನಾರಾಯಣ ನಾಯ್ಕ ಅವರಿಗೆ ಸೇರಿದ ಹೆಂಚಿನ ಕೊಟ್ಟಿಗೆಯು ಸೋಮವಾರ ಬೀಸಿದ ಗಾಳಿ ಹಾಗೂ ಜೋರಾಗಿ ಸುರಿದ ಮಳೆಗೆ ಮುರಿದು ಬಿದ್ದಿದೆ. ದನಗಳು ಮೇವಿಗೆ ಹೋದ ಸಂದರ್ಭದಲ್ಲಿ ಕೊಟ್ಟಿಗೆ ಬಿದ್ದಿರುವುದರಿಂದ ಯಾವುದೇ ಜೀವಹಾನಿ ಆಗಿಲ್ಲ.

ಕೊಟ್ಟಿಗೆಯ ಛಾವಣಿ ಕುಸಿದುಬಿದ್ದು ಹಾನಿಯಾಗಿದೆ. ಹೆಂಚುಗಳು ಒಡೆದಿವೆ. ಅರವತ್ತು ಸಾವಿರಕ್ಕೂ ಹೆಚ್ಚು ಹಾನಿ ಆಗಿರಬಹುದೆಂದು ಅಂದಾಜಿಸಲಾಗಿದೆ. ಉಮ್ಮಚ್ಗಿ ಪಂಚಾಯತ ಕಾರ್ಯದರ್ಶಿ ವೋಹನ್, ಗಣಪತಿ ಪೂಜಾರಿ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಶರಣು ತಂಬ್ಗಿ, ಸಿಬ್ಬಂದಿ ನಾಗರಾಜ ನಾಯ್ಕ ಮೊದಲಾದವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

==================




