ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರು ಜು.4 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಅಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿ ಬಾಳೆಗದ್ದೆಯ ಮನೆಯೊಂದರ ಮೇಲೆ ಮರದ ಟೊಂಗೆ ಬಿದ್ದು ಹಾನಿಯಾದ ಘಟನೆ ನಡೆದಿದೆ.

ಮನೆಯವರೆಲ್ಲ ಊಟ ಮುಗಿಸಿ ಮಲಗಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಸುರಿದ ಮಳೆ ಮತ್ತು ಗಾಳಿಗೆ ಈ ಘಟನೆ ಸಂಭವಿಸಿದ್ದು, ಮಲಗಿದ್ದವರನ್ನು ಎಚ್ಚರಗೊಳಿಸಿ ಗಾಬರಿ ಉಂಟು ಮಾಡಿದೆ. ಪಾರ್ವತಿ ಶೇಖರ್ ಪಟಗಾರ ಎನ್ನುವವರ ಅಡುಗೆ ಕೋಣೆಯ ಮೇಲೆ ಟೊಂಗೆ ಮುರಿದು ಬಿದ್ದಿರುವುದರಿಂದ ಛಾವಣಿಯ ಹೆಂಚುಗಳು ಒಡೆದಿವೆ.

ಉತ್ತರ ಕನ್ನಡ ಜಿಲ್ಲೆಯ 25 ಗ್ರಾಮ ಪಂಚಾಯತ್ ಹೊಸದಾಗಿ 25 ಗ್ರಾಮ ಓನ್ ಕೇಂದ್ರ ಅನುಷ್ಠಾನಗೊಳಿಸುವ ಅವಶ್ಯಕತೆ ಇದ್ದು, ಗ್ರಾಮ ಪಂಚಾಯತಗಳಲ್ಲಿ ಸಮಗ್ರ ನಾಗರಿಕ ಸೇವೆ ಒದಗಿಸಲು ಗ್ರಾಮ ಓನ್ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳನ್ನು ಆಹ್ವಾನಿಸಲಾಗಿದೆ.

ಅಂಕೋಲಾ ತಾಲೂಕಿನ ಅಲಗೇರಿ, ಅಗಸೂರ, ಭಟ್ಕಳ ತಾಲೂಕಿನ ಕೊಪ್ಪ, ದಾಂಡೇಲಿ ತಾಲೂಕಿನ ಅಲೂರ, ಅಂಬೇವಾಡಿ, ಹೊನ್ನಾವರ ತಾಲೂಕಿನ ಕೋಡಣಿ, ಕಾರವಾರ ತಾಲೂಕಿನ ಕೆರವಡಿ, ಅಸ್ನೋಟಿ, ಕುಮಟಾ ತಾಲೂಕಿನ ¨ರ್ಗಿ, ಮುಂಡಗೋಡ ತಾಲೂಕಿನ ಒಣಿಕೇರಿ, ಸಿದ್ದಾಪುರ ತಾಲೂಕಿನ ನೀಲಕುಂದ, ಅಣಲೇಬೈಲ್, ಶಿರಸಿ ತಾಲೂಕಿನ ಮಂಜಗೂಣಿ, ಹುಲೇಕಲ್, ಸುಗಾವಿ, ಸಾಲ್ಕಣಿ, ನೆಗ್ಗು, ಉಂಚಳ್ಳಿ, ಗುಡ್ಡಾಪುರ, ಸೂಪಾ ತಾಲೂಕಿನ ಅಣಶಿ, ಬಾಜರ್ಕುಣಂಗಾ, ಶಿಂಗರಗಾಂನ್, ನಗೋಡಾ, ಉಳವಿ, ಯಲ್ಲಾಪುರ ತಾಲೂಕಿನ ನಂದೊಳ್ಳಿ. ಗ್ರಾಮ ಓನ್ ಪ್ರಾಂಚೈಸಿಗಳಿಗೆ ಅರ್ಜಿ ಸಲ್ಲಿಸುವರು ಜುಲೈ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರ ಕಚೇರಿ ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

===============================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading