




ಝೋನಲ್ ಚೇರ್ ಪರ್ಸನ್ ಸುರೇಶ ಬೋರ್ಕರ್ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ

ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ನಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಝೋನಲ್ ಚೇರ್ ಪರ್ಸನ್ ಸುರೇಶ ಬೋರ್ಕರ್ ಅವರಿಗೆ ಗೋವಾದಲ್ಲಿ ಲಯನ್ಸ್ ಸಂಸ್ಥೆಯ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸುರೇಶ ಬೋರ್ಕರ್ ಅವರ ಸಾಧನೆಯನ್ನು ಪರಿಗಣಿಸಿ, 2025-26ನೇ ಸಾಲಿನ ಡಿಸ್ಟ್ರಿಕ್ಟ್ ಅವಾರ್ಡ ಪ್ರದಾನ ಸಮಾರಂಭದಲ್ಲಿ ಔಟ್ ಸ್ಟ್ಯಾಂಡಿಂಗ್ ಝೋನಲ್ ಚೇರ್ ಪರ್ಸನ್ ಎಂಬ ವಿಶೇಷ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.

ಲಯನ್ಸ್ ಡಿಸ್ಕ್ರಿಕ್ಟ್ ಗವರ್ನರ್ MJF ಜಯಅಮೂಲ್ ನಾಯಕ ಹಾಗೂ MJF ಡಾ.ಕೀರ್ತಿ ನಾಯಕ ಸುರೇಶ ಬೋರ್ಕರ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅರಣ್ಯ ಇಲಾಖೆಯಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ, ಸೇವಾ ನಿವೃತ್ತಿಯ ನಂತರ ಸುರೇಶ ಬೋರ್ಕರ್ ಅವರು ಲಯನ್ಸ್ ಕ್ಲಬ್ ಸಂಸ್ಥೆಯ ಸೇವಾ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಸಮಾಜ ಸೇವೆಯ ಮೂಲಕ ಅನೇಕ ಉತ್ತಮ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಇವರಿಗೆ ಲಯನ್ಸ್ ಕ್ಲಬ್ ಉತ್ತಮ ಅಧ್ಯಕ್ಷ ಎಂದು ಹಾಗೂ ಇವರ ಸಾರಥ್ಯದಲ್ಲಿ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಗೆ ಉತ್ತಮ ಔಟ್ ಸ್ಟ್ಯಾಂಡಿಂಗ್ ಲಯನ್ಸ್ ಕ್ಲಬ್ ಪ್ರಶಸ್ತಿ ದೊರೆತಿತ್ತು.


=======================




