





ಯಲ್ಲಾಪುರ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ವಿವಿದೆಡೆ ಅಪಾರ ಹಾನಿ

ಯಲ್ಲಾಪುರ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ವಿವಿದೆಡೆ ಅಪಾರ ಹಾನಿ ಸಂಭವಿಸಿದೆ. ಮನೆಗಳ ಮೇಲೆ ಮರಬಿದ್ದು ಮನೆಗೆ ಹಾನಿಯಾಗಿರುವ ಘಟನೆಗಳು ನಡೆದಿವೆ.


ರಸ್ತೆಯಲ್ಲಿ ಮರ ಮುರಿದುಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾದ ಬಗ್ಗೆ ವರದಿಯಾಗಿದೆ. ಹಲವೆಡೆ ವಿದ್ಯುತ್ ಮಾರ್ಗಗಳ ಮೇಲೆ ಮರ ಬಿದ್ದು, ವಿದ್ಯುತ್ ಮಾರ್ಗಗಳಿಗೆ ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಂಟರ್ ನೆಟ್ ಸಂಪರ್ಕಗಳು ಸ್ಥಗಿತಗೊಂಡು ಜನರು ಪರದಾಡಿದ ಘಟನೆಯೂ ನಡೆದಿದೆ.


ಮಳೆಯ ಅಬ್ಬರಕ್ಕೆ ಯಲ್ಲಾಪುರ ತಾಲೂಕಿನ ಮಾಗೋಡಿನ ಪಾರ್ವತಿ ನಾಗ್ಯಾ ಸಿದ್ದಿ ಅವರ ಮನೆಯ ಮೇಲೆ ಮರಬಿದ್ದು ಮನೆಗೆ ತೀವ್ರ ಹಾನಿಯಾಗಿದೆ.

ಮರ ಬಿದ್ದ ರಭಸಕ್ಕೆ ಮನೆಯ ಛಾವಣಿಯು ಸಂಪೂರ್ಣವಾಗಿ ಹಾನಿಯಾಗಿದ್ದು, ಗೋಡೆಗಳಿಗೂ ಹಾನಿಯಾಗಿದೆ. ಮನೆಯೊಳಗೆ ಇದ್ದ ವಸ್ತುಗಳಿಗೂ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಭೇಟಿನೀಡಿ ಪರಿಶಿಲನೆ ನಡೆಸಿದ್ದಾರೆ.
ರಸ್ತೆಗೆ ಬಿದ್ದ ಮರ


ಯಲ್ಲಾಪುರ ತಾಲೂಕಿನ ಮಾಗೋಡ ರಸ್ತೆಯಲ್ಲಿ ಮರ ಮುರಿದುಬಿದ್ದು ವಾಹನಗಳ ಓಡಾಟಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಯಿತು.
ಶೌಚಾಲಯದ ಮೇಲೆ ಮರಬಿದ್ದು ಹಾನಿ

ಬಸವಣ್ಣನಗರದ ಲಕ್ಷ್ಮೀ ಸುಬ್ಬ ಮರಾಠಿ ಇವರ ವಾಸ್ತವ್ಯ ಮನೆಯ ಸಮೀಪ ಇರುವ ಅಡಿಕೆ ತೋಟ ಹಾಗೂ ಶೌಚಾಲಯದ ಮೇಲೆ ಮರ ಬಿದ್ದು ಹಾನಿಯಾಗಿದೆ. ಹಾಗೂ ಇದೇ ಗ್ರಾಮದ ರಸ್ತೆ ಮೇಲೆ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಯಲ್ಲಾಪುರ ತಾಲೂಕಿನ ಕೋಳಿಕೇರಿಯ ಸುಭಾಷ್ ಯಲ್ಲಪ್ಪ ಹರಿಜನ ಅವರ ವಾಸ್ತವ್ಯ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ಬಿಳಕಿಯ ಪಿಲ್ಲು ಸಾವೇರ್ ಸಿದ್ದಿ ಇವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

===================




