




ಮಳೆಯ ಅಬ್ಬರಕ್ಕೆ ಕುಸಿದ ಗೋಡೆ: ಮನೆಗೆ ಹಾನಿ

ಜೋರಾಗಿ ಸುರಿದ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಯಿಂದಾಗಿ ವಾಸ್ತವ್ಯದ ಮನೆಯ ಗೋಡೆಯು ಕುಸಿದು ಮನೆಗೆ ಹಾನಿಯಾದ ಘಟನೆ ಯಲ್ಲಾಪುರ ತಾಲೂಕಿನ ಅಂಬಗಾಂವ ಗ್ರಾಮದಲ್ಲಿ ನಡೆದಿದೆ.


ಅಂಬಗಾಂವ ಗ್ರಾಮದ ದತ್ತಾತ್ರೇಯ ವೆಂಕಟ್ರಮಣ ಭಟ್ಟ ಅವರ ಮನೆಯ ಗೋಡೆಯು ಮಳೆಯ ರಭಸಕ್ಕೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಮನೆಯ ಜನರಿಗೆ ಯಾವುದೇ ಅಪಾಯವಾಗಿಲ್ಲ.


ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿನೀಡಿ ಹಾನಿಯ ವಿವರವನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ.

=======================




