ಲಯನ್ಸ್ ಕ್ಲಬ್ ವತಿಯಿಂದ ವಿಜೃಂಭಣೆಯಿಂದ ನಡೆದ ಗುರುವಂದನಾ ಕಾರ್ಯಕ್ರಮ
ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಅಡಿಕೆ ಭವನದಲ್ಲಿ ಗುರುವಂದನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿ ಮಕ್ಕಳ ಬಾಳನ್ನು ಬೆಳಗುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಲಯನ್ಸ್ ಕ್ಲಬ್ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ MJF ಸತ್ಯಾನಂದ ಖೈರನ್, PMJF ರಾಜೇಶ ಸಾಲೆಹಿತ್ತಲ್, PMJF ಡಾ.ಅಶೋಕ ಹೆಗಡೆ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ MJF ಶೇಷಗಿರಿ ಪ್ರಭು ಮಾತನಾಡಿ, ಲಯನ್ಸ್ ಕ್ಲಬ್ ಸಂಘಟನೆಯು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸೇವಾ ಕೈಂಕರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಳಗಿಮನೆ ಶಾಲೆಯ ಶಿಕ್ಷಕಿ ಸವಿತಾ ನಾಯ್ಕ, ಕೊಡಸೆ ಶಾಲೆಯ ಶಿಕ್ಷಕಿ ಶ್ವೇತಾ ದೇಶಭಂಡಾರಿ, ವಿಶ್ವದರ್ಶನ ಶಾಲೆಯ ಶಿಕ್ಷಕಿ ಮಹಾದೇವಿ ಭಟ್ಟ, ಸ್ನೇಹಸಾಗರ ಸಾಲೆಯ ಶಿಕ್ಷಕಿ ವೀಣಾ ರಮೇಶ, ಮಲವಳ್ಳಿ ಶಾಲೆಯ ಶಿಕ್ಷಕ ಎಂ.ವಿ.ಭಟ್ಟ ಹಾಗೂ ಯೋಗಿ ಕೋಚಿಂಗ್ ಸೆಂಟರ್ ನ ಯೋಗೇಶ ಶಾನಭಾಗ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಂಘಟನೆಯ ವಿನಯಾ ಪ್ರಭು ಪ್ರಾರ್ಥಿಸಿದರು. ಸುನಂದಾ ಪಾಟಣಕರ ನಿರ್ವಹಿಸಿದರು. ಕಾರ್ಯದರ್ಶಿ ಮೋಹನ ರೇವಣಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪ್ರಮುಖರಾದ ನಂದನ ಬಾಳಗಿ, ಎಸ್.ಎಲ್.ಭಟ್ಟ, ಸುರೇಶ ಬೋರ್ಕರ್, ವೀಣಾ ಭಟ್ಟ, ಗೋಪಾಲ ನೇತ್ರೇಕರ್, ಎಸ್.ಎನ್.ನಾಯ್ಕ, ಶಾಂತಾರಾಮ ಹೆಗಡೆ, ಶ್ರೀಧರ ಶೆಟ್ಟಿ, ಭವ್ಯಾ ಶೆಟ್ಟಿ, ಮಂಜುನಾಥ ನಾಯ್ಕ, ಮಂಜುಳಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.