ಅತೀ ವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಲಾರಿಯೊಂದು, ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರನು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಿರುವಿನಲ್ಲಿ ನಡೆದಿದೆ.
ಆರೋಪಿ ಲಾರಿ ಚಾಲಕ ಮಧ್ಯಪ್ರದೇಶ ರಾಜ್ಯದ, ಶಿಹೋರ ಜಿಲ್ಲೆಯ ಕುರವರ ಗ್ರಾಮದ ನಿವಾಸಿ ಜಿತೇಂದ್ರ ಸಿಂಗ ಠಾಕೂರ್ ಎಂಬಾತ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಅರಬೈಲ್ ಘಟ್ಟದ ಗಣಪತಿಕಟ್ಟೆ ತಿರುವಿನಲ್ಲಿ,
ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಹೋಗುತ್ತಿದ್ದ ಬೈಕಿಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸೂರ್ಯ ತಂದೆ ಮಹಾಬಲೇಶ್ವರ ಭಂಡಾರಿಯವರ ಬಲಕಾಲಿನ ಮಂಡಿಯ ಹತ್ತಿರ ಹಾಗೂ ಬಲಕಾಲಿನ ಪಾದದ ಹಿಮ್ಮಡಿಗೆ ಗಾಯವಾಗಿದೆ. ಈ ಅಪಘಾತದಲ್ಲಿ ಬೈಕ್ ಹಾಗೂ ಲಾರಿ ಜಕಂಗೊಂಡಿದ್ದು, ಲಾರಿ ಚಾಲಕನ ವಿರುದ್ಧ ಬಾಲು ತಂದೆ ಶ್ರೀಧರ ನಾಯ್ಕ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂದು ದಾಖಲಿಸಿದ್ದಾರೆ.