26-2-2022. ಶನಿವಾರ.

E-YELLAPUR.COM NEWS. ಯಲ್ಲಾಪುರ. ತಾಲೂಕಿನ ವಿವಿದೆಡೆ ಅಡಿಕೆ ಹಾಗೂ ಕಾಳುಮೆಣಸು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಯಲ್ಲಾಪುರ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತಾಲೂಕಿನ ಬಿಳಕಿಯ ಜಡಗಿನಕೊಪ್ಪದ ಫಿಲಿಪ್ ಕೃಷ್ಣಾ ಸಿದ್ದಿ ಹಾಗೂ ಆನಂದ ಸೋಮಾ ಸಿದ್ದಿ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಿದ 2 ಕ್ವಿಂಟಾಲ್ ಕೆಂಪು ಅಡಕೆ, 22 ಕೆಜಿ ಕಾಳುಮೆಣಸು, ಕಳ್ಳತನ ಕ್ರತ್ಯಕ್ಕೆ ಉಪಯೋಗಿಸಿದ ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ.

ADVT

ಈ ಆರೋಪಿಗಳು ತಾಲೂಕಿನ ಸವಣಗೆರೆ, ಹೊನ್ನಳ್ಳಿ, ಹೊಸ್ಮನೆ, ಕಲ್ಲಾರಜಡ್ಡಿ ಮುಂತಾದೆಡೆ ಅಡಕೆ ಹಾಗೂ ಕಾಳಮೆಣಸನ್ನು ಕಳ್ಳತನ ಮಾಡಿದ್ದರು. ಹಿರಿಯ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಸಿಪಿಐ ಸುರೇಶ ಯಳ್ಳೂರು ನೇತ್ರತ್ವದಲ್ಲಿ ಪಿಎಸ್ಸೈಗಳಾದ ಮಂಜುನಾಥ ಗೌಡರ್, ಪ್ರಿಯಾಂಕಾ ನ್ಯಾಮಗೌಡ, ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ್ ಶಫಿ, ಗಜಾನನ ನಾಯ್ಕ, ನಾಗಪ್ಪಾ ಲಮಾಣಿ, ಬಸವರಾಜ ಮಳಗಿನಕೊಪ್ಪ, ಸಕ್ರಪ್ಪಾ ಬ್ಯಾಳಿ, ಪರಶುರಾಮ. ಕೆ ನಂಧೀಶ,ವಿಜಯ,ಚನ್ನಕೇಶವ,ಚಿದಾನಂದ, ಪ್ರವೀಣ ಪೂಜಾರ್, ಪರಶುರಾಮ, ಶೋಭಾ ನಾಯ್ಕ ಮುಂತಾದವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಪಘಾತದಲ್ಲಿ ವೃದ್ಧ ಸಾವು.

ಬೈಕ್ ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಪಟ್ಟಣದ ಕೆಇಬಿ ಕಚೇರಿ ಸಮೀಪ ಎಪಿಎಂಸಿ ರಸ್ತೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ರವೀಂದ್ರ ನಗರದ ನಿವಾಸಿ ಪಾಂಡುರಂಗ ನಾಯ್ಕ ಮೃತಪಟ್ಟಿದ್ದಾರೆ. ಇವರು ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದಿದೆ. ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಉಪ್ಪಳೇಶ್ವರದ ವಿಶ್ವನಾಥ ಗಣಪತಿ ಭಟ್ಟ ಗಾಯಗೊಂಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಬೈಕ್ ಢಿಕ್ಕಿ, ಬೈಕ್ ಸವಾರರಿಗೆ ಗಾಯ.

ಕಾರೊಂದಕ್ಕೆ ಬೈಕ್ ಢಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಹಳಿಯಾಳ ರಸ್ತೆಯ ಕೃಷ್ಣಗದ್ದೆ ಕ್ರಾಸ್ ಬಳಿ ನಡೆದಿದೆ. ಈ ಘಟನೆಯಲ್ಲಿ ಪಟ್ಟಣದ ಗಣಪತಿಗಲ್ಲಿಯ ಜಯಕುಮಾರ್ ಪಿಳ್ಳೆ ಹಾಗೂ ನೂತನ ನಗರದ ಇಬ್ರಾಹಿಂ ಶೇಕ್ ಗಾಯಗೊಂಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸವಾರರಿಬ್ಬರ ಮೇಲೆ ಹಲ್ಲೆ.

ಕಾರಿಗೆ ಢಿಕ್ಕಿಹೊಡೆದರು ಎಂಬ ಕಾರಣಕ್ಕೆ ಬೈಕ್ ಸವಾರರ ಮೇಲೆ ಕಾರಿನಲ್ಲಿದ್ದ ಮೂವರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಾರಿನಲ್ಲಿದ್ದ ಹುಬ್ಬಳ್ಳಿಯ ಅಶೋಕ ರಾಜನಾಳ,ಧಾರವಾಡದ ಸತೀಶ ಪಾಟೀಲ್, ಹಾಗೂ ಸುಭಾಷ ಪಾಟೀಲ್ ಎಂಬುವವರು ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬೈಕ್ ಸವಾರರು ದೂರು ದಾಖಲಿಸಿದ್ದಾರೆ.

ಟಾಟಾ ಎಸಿಇ ವಾಹನ ಹಾಗೂ ಲಾರಿ ಢಿಕ್ಕಿ ; ಮೂವರಿಗೆ ಗಾಯ.

ಟಾಟಾ ಎಸಿಇ ವಾಹನ ಹಾಗೂ ಲಾರಿ ಢಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ತಾಲೂಕಿನ ಹಳಿಯಾಳ ಕ್ರಾಸ್ ಸಮೀಪ ನಡೆದಿದೆ. ಈ ಘಟನೆಯಲ್ಲಿ ಟಾಟಾ ಎಸಿಇ ವಾಹನ ಚಾಲಕ ಹುಬ್ಬಳ್ಳಿಯ ಸುನೀಲ್ ಕರಾಟೆ, ಈ ವಾಹನದಲ್ಲಿದ್ದ ಹನುಮಂತ ಚಲುವಾದಿ ಮತ್ತು ಲಾರಿ ಚಾಲಕ ಕೇರಳದಾಶಿಕ್ ಅವರಿಗೆ ಗಾಯವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ

FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading