ಗಜಮುಖ ಇವೆಂಟ್ಸ್ ಶಿವಮೊಗ್ಗ ಅವರಿಂದ ಯಲ್ಲಾಪುರ ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಮೂರು ದಿನ ನಡೆಯುವ ಸ್ವದೇಶಿ ವಸ್ತುಗಳ ಮಾರಾಟ ಮೇಳ ಮತ್ತು ಬೃಹತ್ ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಶುಕ್ರವಾರ ಚಾಲನೆ ನೀಡಿದರು.

ಮೇಳವನ್ನು ಉದ್ಘಾಟಿಸಿ ಬಾಲು ನಾಯಕ ಮಾತನಾಡಿ, ಸ್ವದೇಶಿ ವಸ್ತುಗಳ ಮಾರಾಟ ಯಲ್ಲಾಪುರದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಹೆಚ್ಚು, ಹೆಚ್ಚು ಬಳಸುವ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಮತ್ತು ಸ್ವದೇಶಿ ವಸ್ತುಗಳ ಉತ್ಪಾದಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು,

ಈ ಹಿಂದೆ ಯಲ್ಲಾಪುರದಲ್ಲಿ ನಡೆದ ಹಲಸು ಮೇಳಕ್ಕೆ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗಿತ್ತು. ಈ ಮೇಳಕ್ಕೂ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಸಂಘಟಕ ರಮೇಶ ಶಿವಮೊಗ್ಗ ಹಾಗೂ ಸ್ಥಳೀಯ ಪ್ರಮುಖರು ಇದ್ದರು.

ಯಲ್ಲಾಪುರದಲ್ಲಿ ನಡೆಯುತ್ತಿರುವ ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಮೇಳಕ್ಕೆ ಆಗಮಿಸಿ, ವಸ್ತುಗಳನ್ನು ಖರೀದಿಸಿದರು. ಆಹಾರ ಮೇಳಕ್ಕೆ ಭೇಟಿನೀಡಿ ವಿವಿಧ ತಿಂಡಿ, ತಿನಿಸುಗಳನ್ನು ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವದೇಶಿ ವಸ್ತುಗಳ ಮಾರಾಟ ಮೇಳದಲ್ಲಿ ರಿಯಾಯಿತಿ ದರದಲ್ಲಿ ಸ್ವದೇಶಿ ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ಖಾದಿ ಬಟ್ಟೆಗಳು, ಇಳಕಲ್ ಸೀರೆಗಳು, ನಿತ್ಯ ಬಳಕೆಯ ಅನೇಕ ವಸ್ತುಗಳು, ಆಯುರ್ವೇದ ಉತ್ಪನ್ನಗಳು, ರೆಡಿಮೇಡ್ ಬಟ್ಟೆಗಳು,

ಮಕ್ಕಳ ಉಡುಪುಗಳು, ಹೋಂ ಮೇಡ್ ವಸ್ತುಗಳು, ಉಪ್ಪಿನಕಾಯಿ, ಹಪ್ಪಳ, ಆದಿವಾಸಿ ಹರ್ಬಲ್ ಆಯಿಲ್ ಹಾಗೂ ಇನ್ನಷ್ಟು ವಸ್ತುಗಳು ಉತ್ಪಾದಕರಿಂದಲೇ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿವೆ. ಮಲ್ಲಿಕಾ ಮಾವಿನ ಸಸಿ, ವಿವಿಧ ತಳಿಯ ಗೇರು ಸಸಿ ಲಭ್ಯವಿದೆ.

ಆಹಾರ ಮೇಳದಲ್ಲಿ ಜಿಲೆಬಿ, ಕ್ಯಾರೆಟ್ ಹೋಳಿಗೆ, ಸ್ಪೇಷಲ್ ಗಿರ್ಮಿಟ್, ಚಾಟ್ಸ್ ದೋಸೆ, ವಡೆ, ಚಕ್ಕುಲಿ ಮುಂತಾದ ಬಾಯಲ್ಲಿ ನೀರೂರಿಸುವ ಖಾದ್ಯಗಳಿವೆ.

=====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading