ಯಲ್ಲಾಪುರ ತಾಲೂಕಿನ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ 2025-26 ನೇ ಸಾಲಿನ 34 ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಸಂಘದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಪ್ರಶಾಂತ ಸಭಾಹಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2024-25 ನೇ ಸಾಲಿನಲ್ಲಿ ಸಂಘದಲ್ಲಿ 2,17,705 ಲೀ ಹಾಲು ಸಂಗ್ರಹವಾಗಿದ್ದು, ವರದಿ ವರ್ಷದಲ್ಲಿ 3,24,845 ಲೀ ಸಂಗ್ರಹಿಸಿದೆ. ಅಂದರೆ ಹಿಂದಿನ ಸಾಲಿಗಿಂತ 1,07,140 ಲೀ ಹೆಚ್ಚಿಗೆ ಹಾಲು ಸಂಗ್ರಹಿಸಿದಂತಾಗಿದೆ. ಇವುಗಳಲ್ಲಿ ಧಾರವಾಡ ಹಾಲು ಒಕ್ಕೂಟಕ್ಕೆ 3,19,411 ಕೆ.ಜಿ ಹಾಗೂ ಸ್ಥಳೀಯವಾಗಿ 14,737 ಲೀ ಹಾಲು ಮಾರಾಟವಾಗಿದೆ.

ವರದಿ ವರ್ಷದಲ್ಲಿ 1,464 ಚೀಲ ಒಕ್ಕೂಟದ ಪಶು ಆಹಾರ (ನಂದಿನಿ ಗೋಲ್ಡ್) 1,550 ಚೀಲ ಒಕ್ಕೂಟದ ರಸ ಮೇವು(ಸೈಲೇಜ್) ಸಂಘದ ಮೂಲಕ ಮಾರಾಟ ಮಾಡಲಾಗಿದೆ ಎಂದರು. ಹಾಗೂ ಸಂಘಕ್ಕೆ 2025-26 ನೇ ಸಾಲಿನಲ್ಲಿ 2,75,757 ರೂ ನಿವ್ವಳ ಲಾಭವಾಗಿದ್ದು. ಸಂಘದ ಪ್ರಗತಿಗೆ ಸದಸ್ಯರ ವಿಶ್ವಾಸಪೂರ್ಣ ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ನಿಸ್ವಾರ್ಥ ಸೇವೆಯೇ ಕಾರಣ ಎಂದರು. ಸಂಘದಲ್ಲಿ 3,000 ಲೀಟರ್ ಸಾಮಥ್ರ್ಯದ ಒಕ್ಕೂಟದ ಬಿ.ಎಂ.ಸಿ ಕೇಂದ್ರವಿದ್ದು ಇದರಿಂದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾಗಿ ಬಡ್ತಿಹೊಂದಿ ಕಾರವಾರಕ್ಕೆ ವರ್ಗಾವಣೆಗೊಂಡ ಪಶು ವೈದ್ಯರಾದ ಡಾ.ಸುಬ್ರಾಯ ಭಟ್ಟ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿ.ಎನ್.ಭಟ್ಟ ಕಾರೆಮನೆ, ನಿರ್ದೇಶಕರುಗಳಾದ ಮಂಜುನಾಥ ಭಟ್ಟ, ನಾರಾಯಣ ಗಾಂವಕರ, ಸುಬ್ರಾಯ ಹೆಗಡೆ, ಸತ್ಯನಾರಾಯಣ ಹೆಗಡೆ,ಸುಬ್ರಹ್ಮಣ್ಯ ಭಟ್ಟ, ಸಂತೋಷ ಮರಾಠಿ, ಮಂಜುನಾಥ ಪಟಗಾರ, ಸರಸ್ವತಿ ಭಟ್ಟ, ಕಮಲಾ ಭಟ್ಟ ಇದ್ದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ವಿಶ್ವೇಶ್ವರ ಹೆಗಡೆ ವಾರ್ಷಿಕ ವರದಿ ಮಂಡಿಸಿದರು. ವಿ.ಎನ್. ಭಟ್ಟ ಕಾರೆಮನೆ ಸ್ವಾಗತಿಸಿದರು. ಮಂಜುನಾಥ ಭಟ್ಟ ದವಣ್ಣಮನೆ ವಂದಿಸಿದರು.

==============

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading