1-3-2022. ಮಂಗಳವಾರ.

E-YELLAPUR.COM NEWS ಯಲ್ಲಾಪುರ.
ಎಲ್ಲ ಬಗೆಯ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಫರ್ನಿಚರ್ ಮಾರಾಟದಲ್ಲಿ ಪ್ರಸಿದ್ಧಿಯಾದ, ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳಿಗೆಗಳನ್ನು ಹೊಂದಿರುವ ಮಿಲನ್ ಎಂಟರ್ ಪ್ರೈಸಸ್ ನವರ ನೂತನ ಮಳಿಗೆಯು ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ಶುಭಾರಂಭಗೊಂಡಿತು.

ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಮಳಿಗೆಯನ್ನು ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಫಾದರ್ ಫೀಟರ್ ಅವರು ಆಶೀರ್ವಚನ ನೀಡಿದರು. ಜಿಲ್ಲೆಯಲ್ಲಿ ಅತೀ ಹೆಚ್ಚು ಶಾಖೆಗಳನ್ನು ಹೊಂದಿರುವ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ
ಆಡಳಿತ ನಿರ್ದೇಶಕ

ಜಾರ್ಜ್ ಫರ್ನಾಂಡೀಸ್ ಅವರು ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ, ಯಲ್ಲಾಪುರದಲ್ಲಿ ಪ್ರಾರಂಭಿಸಲಾದ ಈ ನೂತನ ಮಳಿಗೆಯು ಜಿಲ್ಲೆಯಲ್ಲಿ ಸಂಸ್ಥೆಯ 7 ನೆಯ ಮಳಿಗೆಯಾಗಿದೆ. ಅತ್ಯಂತ ಸ್ಫರ್ಧಾತ್ಮಕ ದರದಲ್ಲಿ ಶ್ರೇಷ್ಠ ಕಂಪನಿಗಳ ಗುಣಮಟ್ಟದ ಎಲ್ಲ ಬಗೆಯ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಫರ್ನಿಚರ್ ಗಳು ಈ ಮಳಿಗೆಯಲ್ಲಿ ಲಭ್ಯ ಇವೆ.

ಉದ್ಯಮದಲ್ಲಿ ನಾವು ವಿಶ್ವಾಸಾರ್ಹ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದು, ನಮಗೆ ಎಲ್ಲರ ಸಹಕಾರ ಅಗತ್ಯ ಎಂದರು.

ADVT

ಸಂಸ್ಥೆಯ ಪ್ರಮುಖರಾದ ಡೋಲರಿಚ್ ಫರ್ನಾಂಡಿಸ್, ಮ್ಯೂರಲ್ ಫರ್ನಾಂಡೀಸ್, ಹೋಲಿ ರೋಜರಿ ಸಂಸ್ಥೆಯ ಫಾ.ರೇಮಂಡ್ ಫರ್ನಾಂಡಿಸ್, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ,

ADVT

ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ, ದಾಸಿಂತ್ ಫರ್ನಾಂಡಿಸ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ADVT

ಮಿಲನ್ ಎಂಟರ್ ಪ್ರೈಸಸ್ ಪ್ರಾರಂಭೋತ್ಸವದ ಪ್ರಯುಕ್ತ ಪ್ರತಿ ಖರೀದಿಯೊಂದಿಗೆ ಉಚಿತ ಉಡುಗೊರೆ,ಹೋಂ ಡೆಲೆವರಿ, ಶೂನ್ಯ ಬಡ್ಡಿದರದಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯ ಹಾಗೂ ಇನ್ನಿತರ ಆಕರ್ಷಕ ಕೊಡುಗೆಗಳು ಲಭ್ಯ ಇವೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ

FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading