14-3-2022. ಸೋಮವಾರ.

ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.

ಹೋಳಿ ಹಬ್ಬ ಹಾಗೂ ಯುಗಾದಿ ಉತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಸಾರ್ವಜನಿಕ ಶಾಂತಿ ಸಭೆಯು ಪಟ್ಟಣದ ಎಪಿಎಂಸಿ ಆವಾರದ ಅಡಕೆ ಭವನದಲ್ಲಿ ಸೋಮವಾರ ನಡೆಯಿತು.

ADVT

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಮಾತನಾಡಿ, ಹೋಳಿ ಹಬ್ಬದ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಜನರ ಮೇಲೆ ಬಣ್ಣಗಳನ್ನು ಎರಚಬಾರದು. ರಾಸಾಯನಿಕ ಮಿಶ್ರಣದ ಬಣ್ಣವನ್ನು ಬಳಸಬಾರದು. ಹೋಳಿ ಹಾಗೂ ಯುಗಾದಿ ಹಬ್ಬಗಳನ್ನು ಶಾಂತಿ, ಸುವ್ಯವಸ್ಥಿತವಾಗಿ, ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಆಚರಿಸಬೇಕು ಎಂದರು.

ADVT

ಸಿಪಿಐ ಸುರೇಶ ಯಳ್ಳೂರು ಮಾತನಾಡಿ, ಹಬ್ಬಗಳ ಆಚರಣೆಯನ್ನು ಮುಂಜಾಗ್ರತೆಯೊಂದಿಗೆ, ಸಾಮರಸ್ಯದಿಂದ ಆಚರಿಸಬೇಕು ಎಂದರು. ಸಭೆಯಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂಗನಬಸಯ್ಯಾ ಹಾಗೂ ಹೋಳಿ, ಯುಗಾದಿ ಉತ್ಸವ ಆಚರಣೆಯ ಸಮಿತಿಗಳ ಪ್ರಮುಖರು ಇದ್ದರು.

ADVT

ಕರ್ತವ್ಯ ನಿರತ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ.

ಶಿರಸಿಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ, ಯಲ್ಲಾಪುರ ಡಿಪೋಕ್ಕೆ ಸೇರಿದ ಸಾರಿಗೆ ಬಸ್ಸಿನ ನಿರ್ವಾಹಕರೊಬ್ಬರಿಗೆ ಬಸ್ ಪ್ರಯಾಣಿಕನು ಹಲ್ಲೆ ಮಾಡಿದ ಘಟನೆ ನಡೆದಿದೆ. ಶಿರಸಿಯಿಂದ ಬಸ್ಸಿನಲ್ಲಿ ಆಗಮಿಸುತ್ತಿದ್ದ ಪ್ರಯಾಣಿಕನು ಬಸ್ಸಿನಲ್ಲಿ ವಾಂತಿ ಮಾಡಿದ್ದು, ವಾಂತಿಯನ್ನು ವರೆಸಿ ಹೋಗಬೇಕು ಎಂದು ನಿರ್ವಾಹಕ ಹೇಳಿದ್ದಕ್ಕೆ ಸಿಟ್ಟಾದ ಪ್ರಯಾಣಿಕನು ಚವತ್ತಿ ಬಸ್ ತಂಗುದಾಣದ ಹತ್ತಿರ ಕರ್ತವ್ಯ ನಿರತ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading