18-3-2022. ಶುಕ್ರವಾರ.

ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಹಾಗೂ ತಾಲೂಕ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಂಚಿಕೇರಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕವಿಗೋಷ್ಠಿ ಮತ್ತು ಪದಗ್ರಹಣ ಸಮಾರಂಭ ನಡೆಯಿತು.

ADVT

ಕಾರ್ಯಕ್ರಮವನ್ನು ಉಧ್ಘಾಟಿಸಿದ ಹಾಸಣಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಸಾವಿತ್ರಿ ಬಾಯಿ ಫುಲೆ, ಸುಧಾ ಮೂರ್ತಿಯರಂತಹ ಮಹಾನ್ ಸಾಧಕರು ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದರು.

ADVT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಿವಲೀಲಾ ಹುಣಸಗಿ ಮಾತನಾಡಿ, ಸಮಾಜದಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣ ಮಾಡಿ ಮಹಿಳಾ ಸಬಲೀಕರಣಕ್ಕೆ ಪುರುಷರು ಸಹಕಾರ ನೀಡಬೇಕು ಎಂದರು.

ADVT

ಇದೇ ಸಂದರ್ಭದಲ್ಲಿ ಎಲೆಮರೆಯ ಕಾಯಿಯಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇವಿ ಗೋವಿಂದ ಮೊಗೇರ್ ಗೋರ್ಸಗದ್ದೆ, ಪುಷ್ಪ ಮಾದೇವ ನಾಯಕ ಕವಡಿಕೇರಿ, ಗಿರಿಜಾ ಪರಶುರಾಮ ಸಿದ್ಧಿ ಹಾಸಣಗಿ ಅಣಲೇಸರ, ಮಣಿ ಲಿಂಗಪ್ಪ ವಡ್ಡರ್ ಉಮ್ಮಚಗಿ, ಗಿರಿಜಾ ಗುರುಪ್ರಸಾದ್ ಕೊಡಸಳ್ಳಿ ಮುಂತಾದ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು.

ADVT

ಪದಗ್ರಹಣ

ಕಾರ್ಯಕ್ರಮದಲ್ಲಿ ಶ್ರೀರಂಗ ಕಟ್ಟಿ, ಯಮುನಾ ನಾಯಕ್, ಸುನಂದಾ ಪಾಟನಕರ, ಆಶಾ ಶೆಟ್ಟಿ, ಭವ್ಯ ಶೆಟ್ಟಿ, ರೇಖಾ ಭಟ್, ಸಮೀರ್ ಎಸ್ ಜಿ, ಮೇಘನಾ ಎಂ.ಬಿ. ಪುಷ್ಪಲತಾ ನಾಯಕ, ಜಗದೀಶ್ ನಾಯಕ್, ಸತೀಶ್ ಶೆಟ್ಟಿ ,ಸುಚೇತಾ ಮದ್ಗುಣಿ, ಚೈತ್ರ ಕುಣಬಿ ಗಂಗಾಧರ್‍ಎಸ್‍ಎಲ್, ಸುಧಾಕರ್ ನಾಯಕ್, ರಾಘವೇಂದ್ರ ಪಟಗಾರ, ಚಂದ್ರಕಲಾ ದೇವಾಡಿಗ , ಪದಗ್ರಹಣ ಮಾಡಿದರು.

ಸತೀಶ್ ಶೆಟ್ಟಿ , ಭವ್ಯ ಶೆಟ್ಟಿ , ಪ್ರಭಾವತಿ ಗೋವಿ, ಸುನಂದಾ ಪಾಠಣಕರ್ ಸ್ವಾತಿ ಶಂಕರ್ ನಾಯಕ್ ಸನ್ಮಾನ ಪತ್ರವನ್ನು ವಾಚಿಸಿದರು ಸಪ್ತಮಿ ಬಂಕಾಪುರ್ ಭರತನಾಟ್ಯ ಪ್ರದರ್ಶಿಸಿದರು. ರೇಖಾ ಭಟ್ ಎಲ್ಲರನ್ನೂ ಸ್ವಾಗತಿಸಿದರು ಆಶಾ ಶೆಟ್ಟಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿ ಮತ್ತು ಆಶಯವನ್ನು ವ್ಯಕ್ತಪಡಿಸಿದರು ಶಿಕ್ಷಕರ ನವೀನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು ಭಾರತಿ ನಿಲುವಿಗೆ ವಂದನಾರ್ಪಣೆ ನಡೆಸಿದರು. .
ಗಿರಿಜಾ ಪರಶುರಾಮ ಸಿದ್ಧಿ ಟಿಣಿಂಗ,ಮಿಣಿಂಗ ಟಿಶ್ಯಾ ಹಾಡನ್ನು ಹಾಡಿ ರಂಜಿಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading