16-5-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ಪಟ್ಟಣದ ಬಾಳಗಿಮನೆ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ADVT

ಶಿಕ್ಷಣ ಸಂಯೋಜಕ ಷಣ್ಮುಖ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊರೋನಾ ಕಾರಣದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿನ ಕಲಿಕಾ ಕೊರತೆಯನ್ನು ನೀಗಿಸಲು ಹಾಗೂ ಕಲಿಕೆಯನ್ನು ಸಾಧಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಶಾಲಾಪ್ರಾರಂಭದ ದಿನದಿಂದಲೇ ಕಲಿಕೆ ಪ್ರಾರಂಭಿಸಲಾಗಿದೆ ಎಂದರು.

ADVT

ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿದ ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಸರ್ಕಾರದಿಂದ ಹಲವು ಸೌಲಭ್ಯಗಳು ದೊರೆಯುತ್ತಿವೆ.

ADVT

ಇವುಗಳ ಸದುಪಯೋಗವನ್ನು ಪಡೆದು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆಗಳನ್ನು ಮಾಡುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದರು.ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಕರೀಂ ಶೇಖ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಣ ಇಲಾಖೆಯ ಶಿವಾನಂದ ವೆರ್ಣೇಕರ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವೇದಾವತಿ ಬಾಂದೇಕರ್,

ADVT

ಪ್ರಮುಖರಾದ ವೆಂಕಟ್ರಮಣ ಭಟ್ಟ ಮುಂತಾದವರು ಇದ್ದರು. ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ADVT

ಶಾಲಾ ಕೋಠಡಿ ಹಾಗೂ ಶೌಚಾಲಯದ ಮುಂಭಾಗಕ್ಕೆ ನೆಲಹಾಸು ಅಳವಡಿಸಲು ದೇಣಿಗೆ ನೀಡಿದ ಶ್ರೀಧರ ಪಟಗಾರ ಹಾಗೂ ಶಾಲೆಯ ಮಾಜಿ ವಿದ್ಯಾರ್ಥಿಗಳ ಕೊಡುಗೆಗೆ ಕ್ರತಜ್ಞತೆ ಸಲ್ಲಿಸಲಾಯಿತು.

ಮುಖ್ಯಾಧ್ಯಾಪಕ ಗಜಾನನ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪವನ್‍ಕುಮಾರ ನಿರ್ವಹಿಸಿ, ವಂದಿಸಿದರು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading