21-5-2022. ಶನಿವಾರ.

E-YELLAPUR.COM NEWS ಯಲ್ಲಾಪುರ

ಸಹಾಯಕ ಆಯುಕ್ತ ದೇವರಾಜ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮುಂಗಾರು ಸಿದ್ಧತಾ ಸಭೆ ನಡೆಯಿತು.

ADVT

ಮಳೆಗಾಲದ ಪೂರ್ವದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆಯ ಕುರಿತು ಹಾಗೂ ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಅಧಿಕಾರಿಗಳಿಗೆ ಸಹಾಯಕ ಆಯುಕ್ತರು ವಿವಿಧ ಸೂಚನೆಗಳನ್ನು ನೀಡಿದರು.

ADVT

ಸಭೆಯಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಸಿಪಿಐ ಸುರೇಶ ಯಳ್ಳೂರು, ವಲಯ ಅರಣ್ಯಾಧಿಕಾರಿ ಪ್ರಸಾದ ಪೆಡ್ನೇಕರ್,

ADVT

ಪ.ಪಂ.ಮುಖ್ಯಾಧಿಕಾರಿ ಸಂಗನಬಸಯ್ಯಾ, ಗ್ರೇಡ್-2 ತಹಸೀಲ್ದಾರ್ ಸಿ.ಜಿ.ನಾಯ್ಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು,ಪಿಡಿಒಗಳು ಇದ್ದರು.

ಕಾರು ಪಲ್ಟಿ-ಮಗು ಸಾವು, ಇಬ್ಬರಿಗೆ ಗಾಯ.

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ಮಗು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಮಳಲಗಾಂ ಶಾಲೆಯ ಕ್ರಾಸ್ ಬಳಿ ನಡೆದಿದೆ. ಯಲ್ಲಾಪುರದ ಸಾಗರ ಹೆಗಡೆ ಎಂಬುವವರು ಯಲ್ಲಾಪುರ ಕಡೆಯಿಂದ ಮಂಚಿಕೇರಿ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಮಳೆ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆಗೆ ಅಡ್ಡಬಂದ ಬಿಡಾಡಿ ದನವನ್ನು ತಪ್ಪಿಸಲು ಹೋಗಿ ಕಾರಿನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ.

ಕಾರು ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದ ಮೂರು ವರ್ಷದ ಸುಯೋಗ ಹೆಗಡೆ ಸ್ಥಳದಲ್ಲೆ ಮೃತಪಟ್ಟಿದ್ದು, ಕಾರಿನಲ್ಲಿದ್ದ ನವ್ಯಾ ಕೋಂ ಸಾಗರ ಹೆಗಡೆ ಹೆಗಡೆ (26 ವರ್ಷ) ಹಾಗೂ ಕಾರು ಚಾಲಕ ಸಾಗರ ಹೆಗಡೆ ಗಾಯಗೊಂಡಿದ್ದಾರೆ. ಕಾರು ಜಕಂಗೊಂಡಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಯತ್ನ ; ಶಾಲೆ ಬಿಟ್ಟಿದ್ದ ವಿದ್ಯಾರ್ಥಿಗಳಿಗೆ ಉತ್ತಮ ಅಂಕ.

E-YELLAPUR.COM NEWS ಯಲ್ಲಾಪುರ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರಂತರ ಪ್ರಯತ್ನ ಹಾಗೂ ಶಿಕ್ಷಕರ ಸತತ ಪ್ರಯತ್ನದ ಫಲವಾಗಿ ಶಾಲೆ ಬಿಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು ಪುನಃ ಶಾಲೆಗೆ ಸೇರಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಶ್ಲಾಘನೆಗೆ ಪಾತ್ರವಾಗಿದೆ.

ADVT

ತಾಲೂಕಿನ ಹಂಸನಗದ್ದೆ ಸರ್ಕಾರಿ ಪ್ರೌಢಶಾಲೆಯಲ್ಲಿ 2021-2022 ನೇ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನೀಲಕಂಠ ಸಿದ್ದಿ ಎಂಬಾತ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ 8 ರಿಂದ 10 ದಿನ ಮಾತ್ರ ಶಾಲೆಗೆ ಬಂದಿದ್ದು ನಂತರದ ದಿನಗಳಲ್ಲಿ ತೋಟದ

ADVT

ಕೆಲಸಕ್ಕೆ ಹೋಗುತ್ತಿದ್ದ ಕಾರಣ ಶಾಲೆಯಿಂದ ಅನೇಕ ತಿಂಗಳ ಕಾಲ ಹೊರಗುಳಿದಿದ್ದನು. ಮುಖ್ಯಾಧ್ಯಾಪಕರಿಂದ ಹಿಡಿದು ಪ್ರತಿಯೊಬ್ಬ ಶಿಕ್ಷಕರೂ ಅವನ ಮನೆಗೆ ಹೋಗಿ ಮನ ಒಲಿಸಿದರೂ ಕೂಡ ಶಾಲೆ ಕಡೆ ಮುಖ ಮಾಡಲೇ ಇಲ್ಲ.

ADVT

ಅವನು ಕೆಲಸ ಮಾಡುತ್ತಿರುವ ತೋಟದ ಮಾಲೀಕರ ಮನೆಗೆ ಹೋಗಿ ಅವರಿಂದ ಹೇಳಿಸಿದರೂ ಕೂಡ ಮನಸ್ಸು ಬದಲಾಯಿಸದಿದ್ದಾಗ ಅನಿವಾರ್ಯವಾಗಿ ಕ್ಷೇತ್ರಶಿಕ್ಷಣಾಧಿಕಾರಿಯ ಗಮನಕ್ಕೆ ತರಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆಯವರು ಆ ಬಗ್ಗೆ ವಿಶೇಷ ಗಮನಹರಿಸಿ ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಪುನಃ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದರು.

ADVT

ನಂತರದಲ್ಲಿಯೂ ಕೂಡ ಮಗು ಶಾಲೆಯನ್ನು ತಪ್ಪಿಸುತ್ತಿದ್ದ, ಆ ಸಂದರ್ಭಗಳಲ್ಲಿ ಶಾಲೆಯ ಶಿಕ್ಷಕರು ಅವರ ಮನೆಗೆ ಹೋಗಿ ತಮ್ಮ ಬೈಕಿನಲ್ಲಿಯೇ ಶಾಲೆಗೆ ಕರೆದುಕೊಂಡು ಬರುತ್ತಿದ್ದರು. ಅವನ ಬಗ್ಗೆ ವಿಶೇಷ ಗಮನ ನೀಡಿ ಶೈಕ್ಷಣಿಕವಾಗಿ ಸಿದ್ಧಪಡಿಸಲಾಯಿತು. ಎಲ್ಲರ ಪ್ರಯತ್ನದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಈತ ಶೇಕಡಾ 61.12 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ.

ADVT

ತಾಲೂಕಿನ ಸರಕಾರಿ ಉರ್ದು ಪ್ರೌಢ ಶಾಲೆ ಕಿರವತ್ತಿಯ ವಿದ್ಯಾರ್ಥಿನಿ ಫರಾನ ಖಾನ್ (ಮಂಚಿಕೇರಿ) ಇವಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 68.5% ಅಂಕಗಳೊಂದಿಗೆ ಉತ್ತಿರ್ಣ ಆಗಿದ್ದಾಳೆ.

ಬಿ.ಇ.ಒ.ಎನ್ ಆರ್. ಹೆಗಡೆ, ಬಿ.ಆರ್.ಸಿ. ಕೋ.ಆರ್ಡಿನೇಟರ್ ಶ್ರೀರಾಮ ಹೆಗಡೆ ಮತ್ತು ಶಾಲೆಯ ಶಿಕ್ಷಕರು ಈ ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading