30-5-2022. ಸೋಮವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ಸೀಮಾ ವೈದಿಕ ಪರಿಷತ್ ವತಿಯಿಂದ ರವಿವಾರ ತಾಲೂಕಿನ ಶ್ರೀ ಕ್ಷೇತ್ರ ಚಂದ್ಗುಳಿ ಸಿದ್ಧಿವಿನಾಯಕ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಅಥರ್ವ ಶೀರ್ಷ ಹವನ, ಅನ್ನ ಸಂತರ್ಪಣೆ ಹಾಗೂ ಧರ್ಮ ಸಭೆ ನಡೆಯಿತು.

ADVT

ಸನಾತನ ವೈದಿಕ ಧರ್ಮದ ಸಂರಕ್ಷಣೆ, ಬರಬಹುದಾದ ಪ್ರಕೃತಿ ವಿಕೋಪ, ವಿವಿಧ ರೋಗ ಬಾಧೆಗಳ ಪರಿಹಾರಕ್ಕೆ ದೇವರಲ್ಲಿ ಪ್ರಾರ್ಥಿಸಲಾಯಿತು. ಮಧ್ಯಾಹ್ನ ದೇವಾಲಯದ ಸಿದ್ಧಿವಿನಾಯಕ ಸಭಾಭವನದಲ್ಲಿ ಧರ್ಮ ಸಭೆ ನಡೆಯಿತು.

ADVT

ಯಲ್ಲಾಪುರ . ಸಂಸ್ಕೃತ ಪ್ರಾಧ್ಯಾಪಕ ವಿ. ಡಾ. ಮಹಾಬಲೇಶ್ವರ ಭಟ್ಟ ಕಿರ್ಕುಂಭತ್ತಿ ವಿಶೇಷ ಧಾರ್ಮಿಕ ಉಪನ್ಯಾಸ ನೀಡಿ, ಶ್ರೀ ಗಣಪತಿಯ ಮಹಿಮೆ, ವೇದಾಂತ ತತ್ವದ ಅಡಿಗಟ್ಟಿನಲ್ಲಿ

ADVT

ಗಣಪತಿಯ ಆರಾಧನಾ ವಿಶೇಷತೆ, ಮತ್ತು ವೈದಿಕನ ಬದುಕಿನ ಶ್ರೇಯಸ್ಸಿಗೆ ಆತನ ಧರ್ಮಾಚರಣೆಯ ಮಹತ್ವದ ಕುರಿತು ಸರಳವಾಗಿ, ಮನಮುಟ್ಟುವಂತೆ ವಿವರಿಸಿದರು.

ADVT

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಪರಿಷತ್ ಸಂಚಾಲಕ ವಿ.ಕೃಷ್ಣ ಜೋಶಿ ಮೂಲೇಮನೆ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ಅನುಗ್ರಹ ಸಂದೇಶವನ್ನು ತಿಳಿಸಿ ವೈದಿಕ ಪರಿಷತ್ ನಿರ್ದೇಶನದಲ್ಲಿ ಸೀಮೆಯಲ್ಲಿ ಧಾರ್ಮಿಕತೆ ಚೆನ್ನಾಗಿ ನಡೆಯಲೆಂದು ಆಶೀರ್ವದಿಸಿದರು.

ADVT

ಅಧ್ಯಕ್ಷತೆ ವಹಿಸಿದ್ದ ಸೀಮಾ ವೈದಿಕ ಪರಿಷತ್ ಅಧ್ಯಕ್ಷ ವಿ.ನಾರಾಯಣ ಭಟ್ಟ ಮೊಟ್ಟೆಪಾಲು (ಉಮ್ಮಚಗಿ) ಮಾತನಾಡಿ ಸಂಘಟನೆಯ ಬಲ ಸಂವರ್ಧನೆ, ಶ್ರದ್ಧೇಯ ಧರ್ಮಕರ್ಮಾಚರಣೆ ಮತ್ತು ಅವುಗಳ ಪ್ರಯೋಜನದ ಕುರಿತು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದರು.

ADVT

ಸೀಮಾ ವ್ಯಾಪ್ತಿಯ 60 ಕ್ಕೂ ಹೆಚ್ಚು ವೈದಿಕರು, ಗೃಹಸ್ಥರು ಹಾಗೂ ಮಾತೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಸೇವೆಯಲ್ಲಿ ಭಾಗವಹಿಸಿದ್ದರು.

ADVT

ಸೀಮಾ ವೈದಿಕ ಪರಿಷತ್ ಪ್ರಧಾನ ಕಾರ್ಯದರ್ಶಿ ವಿ.ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಷತ್ತಿನ ಪ್ರಸ್ತುತತೆಯನ್ನು ತಿಳಿಸಿದ್ದರು.

ADVT

ಸುಮಂಗಲಾ ಭಟ್ಟ, ಗುಂಡ್ಕಲ್ ಪ್ರಾರ್ಥಿಸಿದರು. ವೆಂಕಟ್ರಮಣ ಭಟ್ಟ ಮೊಟ್ಟೆಗದ್ದೆ ವಂದಿಸಿದರು. ಗಣಪತಿ ಭಟ್ಟ ಕೋಲೀಬೇಣ ನಿರೂಪಿಸಿದರು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading