3-6-2022. ಶುಕ್ರವಾರ.

E-YELLAPUR.COM NEWS ಯಲ್ಲಾಪುರ.

ಹಾಸಣಗಿ ಪಂಚಾಯತ ವ್ಯಾಪ್ತಿಯ ಹೊನ್ನಳ್ಳಿ ಗುರುಪ್ರಸಾದ ಮೋಹನ ಭಟ್ಟ ಅವರ ಅಡಿಕೆ ತೋಟದಲ್ಲಿ ಜೂ.4 ಶನಿವಾರ ಕಾರ್ಬನ್ ಫೈಬರ್ ದೋಟಿ ಮೂಲಕ ಔಷಧ ಸಿಂಪರಣಾ ಕಾರ್ಯಾಗಾರ ನಡೆಯಲಿದೆ.

ADVT

ಜಿಲ್ಲಾಪಂಚಾಯತ ಉತ್ತರಕನ್ನಡ, ಗ್ರಾಮಪಂಚಾಯತ ಹಾಣಗಿ,ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾಸಹಕಾರಿ ಸಂಘ ಹಾಸಣಗಿ ಸರ್ವಜ್ಞೇಂದ್ರ ರೈತ ಉತ್ಪಾದಕ ಸಂಘ (ರಿ) ಉಮ್ಮಚ್ಗಿ, ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಯಲ್ಲಾಪುರ

ADVT

ಇವರುಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಬನ್ ಫೈಬರ್ ದೋಟಿ ಮೂಲಕ ಔಷಧ ಸಿಂಪರಣೆಯ ಬಗ್ಗೆ ತಜ್ಞರ ಮಾಹಿತಿಯೊಂದಿಗೆ ಪ್ರಾತ್ಯಕ್ಷಿಕೆ

ADVT

ಮತ್ತು ಆಸಕ್ತರಿಗೆ ತರಬೇತಿ ಕೂಡ ನೀಡಲಾಗುವುದೆಂದು ಕೃಷಿ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVT

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಗುರುಪ್ರಸಾದ ಮೋಹನ ಭಟ್ಟ ತಿಳಿಸಿದ್ದಾರೆ.

ADVT

ಬೈಕ್ ಅಪಘಾತ; ಪಾದಚಾರಿ ಸಾವು.

ಯಲ್ಲಾಪುರ ಪಟ್ಟಣದ ಕೋರ್ಟ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ವೇಗವಾಗಿ ಚಲಾಯಿಸಿಕೊಂಡುಬಂದ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು

ADVT

ಹೋಗುತ್ತಿದ್ದ ವ್ಯಕ್ತಿಗೆ ಢಿಕ್ಕಿಯಾದ ಪರಿಣಾಮ ವ್ಯಕ್ತಿಯು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಪಾದಚಾರಿಯನ್ನು ಚನ್ನಪ್ಪಾ ಬಾಳಪ್ಪಾ ಗುಡದೂರು ಎಂದು ಗುರುತಿಸಲಾಗಿದೆ.

ADVT

ಬೈಕಿನ ಹಿಂಬದಿ ಕುಳಿತಿದ್ದ ಭೀಮಷಿ ವಾಲ್ಮೀಕಿ ಗಾಯಗೊಂಡಿದ್ದು, ಬೈಕ್ ಸವಾರ ಬೈಲಂದೂರಿನ ರಾಜಾರಾಮ ಯಾದವಗೆ ಸಾದಾ ಗಾಯವಾಗಿದೆ.

ADVT

ನಿಯಂತ್ರಣ ತಪ್ಪಿದ ಬೈಕ್ ಹೆದ್ದಾರಿ ಬದಿಯ ಮನೆಯೊಂದರ ಗೇಟಿಗೆ ಢಿಕ್ಕಿಯಾಗಿದೆ.

ADVT

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading