5-6-2022. ರವಿವಾರ.
E-YELLAPUR.COM NEWS ಯಲ್ಲಾಪುರ.
ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ರವಿವಾರ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ADVT
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ ಅರಣ್ಯಾಧಿಕಾರಿ ಪ್ರಸಾದ ಪೆಡ್ನೇಕರ ಮಾತನಾಡಿ, ಪರಿಸರವನ್ನು ರಕ್ಷಿಸುವ ಹೊಣೆ ನಮ್ಮದಾಗಿದೆ. ಅರಣ್ಯ ಸಂಪತ್ತುಗಳನ್ನು, ವನ್ಯ ಜೀವಿಗಳನ್ನು ರಕ್ಷಿಸಬೇಕು. ಅರಣ್ಯ ಇಲಾಖೆಯಿಂದ ಆಯೋಜಿಸಲಾದ ಬಿತ್ತೋತ್ಸವ ಅಭಿಯಾನವು ಜೂ.12ರವರೆಗೆ ನಡೆಯಲಿದೆ. ಬಿತ್ತೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ADVT
ಸ್ನೇಹಸಾಗರ ವಸತಿ ಶಾಲೆಯ ಮುಖ್ಯಸ್ಥ ಎಸ್ ಎಲ್ ಭಟ್, ಉಪವಲಯ ಅರಣ್ಯಾಧಿಕಾರಿ ಆನಂದ ಶಿರಗಾಂವಿ,ರೇವಣಪ್ಪ ಬಿರಾದಾರ,ಮಲ್ಲಿಕಾರ್ಜುನ ಗಾವಡೆ ಮುಖ್ಯಾಧ್ಯಪಕ ಎನ್ ಎ ಭಟ್ಟ ,
ADVT
ಅರಣ್ಯ ಇಲಾಖೆಯ ಸಿಬ್ಬಂದಿಗಳದ ನಾಮದೇವ ಲಮಾಣಿ, ಕೇಶವ ಮೇಸ್ತಾ, ಶಂಕರ ಗೌಡ, ಸುಬ್ರಹ್ಮಣ್ಯ ಸಿದ್ದಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ADVT
ಜೂನ್ 12ರವರೆಗೆ ಬಿತ್ತೋತ್ಸವ ಅಭಿಯಾನ.
ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಜೂ.5ರಿಂದ ಜೂ.12ರವರೆಗೆ ಬಿತ್ತೋತ್ಸವ ಅಭಿಯಾನ ನಡೆಯಲಿದೆ. ಬಿತ್ತೋತ್ಸವದಲ್ಲಿ ಸ್ಥಳೀಯವಾಗಿ ಲಭ್ಯವಿರುವ ವಿವಿಧ ಬೀಜಗಳನ್ನು ಬಿತ್ತಲಾಗುವುದು.
ADVT
ಇದೇ ಸಂದರ್ಭದಲ್ಲಿ ವಿವಿದೆಡೆ ಸಸಿಗಳನ್ನು ನೆಡುವ ವನೀಕರಣ ಪ್ರಕ್ರಿಯೆಯೂ ನಡೆಯಲಿದೆ. 2022-23 ನೇಸಾಲಿನ ಮಳೆಗಾಲದ ಸಂದರ್ಭದಲ್ಲಿ ಒಟ್ಟೂ 700205 ಸಸಿಗಳು ವಿವಿಧ ನರ್ಸರಿಗಳಲ್ಲಿ ಅರಣ್ಯ ಪ್ರದೇಶದಲ್ಲಿ ಬೆಳೆಸಲು ಹಾಗೂ ರೈತರಿಗೆ ವಿತರಿಸಲು ಲಭ್ಯ ಇರುತ್ತವೆ.
ADVT
ಯಲ್ಲಾಪುರ ವಲಯದ ಯರಕನಬೈಲ್ ನರ್ಸರಿಯಲ್ಲಿ 23750 ಸಸಿಗಳು, ಸಬಗೇರಿ ನರ್ಸರಿಯಲ್ಲಿ 92700 ಸಸಿಗಳು, ಕಿರವತ್ತಿ ವಲಯದ ಬಸಳೇಬೈಲಿನಲ್ಲಿ 122470 ಸಸಿಗಳು, ಮಂಚಿಕೇರಿ ವಲಯದ ಕುರಿಕೊಪ್ಪ ನರ್ಸರಿಯಲ್ಲಿ 41494 ಸಸಿಗಳು, ಭರಣಿ ನರ್ಸರಿಯಲ್ಲಿ 75000 ಸಸಿಗಳು,
ADVT
ಇಡಗುಂದಿ ವಲಯದ ಚಿನ್ನಾಪುರ ನರ್ಸರಿಯಲ್ಲಿ 66180 ಸಸಿಗಳು, ಬಾರೆ ನರ್ಸರಿಯಲ್ಲಿ 34840 ಸಸಿಗಳು, ಮುಂಡಗೋಡ ವಲಯದ ಕಾಳಗನಕೊಪ್ಪ ನರ್ಸರಿಯಲ್ಲಿ 132728 ಸಸಿಗಳು,
ಕಾತೂರು ವಲಯದ ಓರಲಗಿ ನರ್ಸರಿಯಲ್ಲಿ 111044 ಸಸಿಗಳನ್ನು ಬೆಳೆಸಲಾಗಿದೆ. ಅರಣ್ಯ ಇಲಾಖೆಯ ಆರ್‍ಎಸ್‍ಪಿಡಿ ಯೋಜನೆಯಲ್ಲಿ ರಿಯಾಯಿತಿ ದರದಲ್ಲಿ ಸಸಿಗಳ ಮಾರಾಟ ಮಾಡಲಾಗುತ್ತದೆ.
ADVT
ಸಸಿಗೆ 3 ರೂ. ಹಾಗೂ 1 ರೂ.ನಂತೆ ವಿತರಣೆ ಮಾಡಲಾಗುತ್ತದೆ. ಕೆಎಪಿವೈ ಯೋಜನೆಯಡಿ ಸಸಿಗಳನ್ನು ನೆಟ್ಟ ರೈತರಿಗೆ ಒಂದನೇ ವರ್ಷಕ್ಕೆ 35 ರೂ, ಎರಡನೇ ವರ್ಷಕ್ಕೆ 40 ರೂ, ಮೂರನೇ ವರ್ಷ 50 ರೂ.ನಂತೆ ಒಟ್ಟು 125 ರೂ.ಗಳನ್ನು ನೀಡಲಾಗುತ್ತದೆ.
ADVT
ADVT
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
- ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
by TEAM E – YELLAPUR
ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ…
Read more: ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
- ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ
by TEAM E – YELLAPUR
- ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
by TEAM E – YELLAPUR
ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ ಗಂಧದ ಮರದ ತುದಿಯ ಭಾಗವನ್ನು…
Read more: ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
- ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು ಆರೋಪಿಗಳಾದ ಯಲ್ಲಾಪುರ…
Read more: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
- ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು
by TEAM E – YELLAPUR
- ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್
by TEAM E – YELLAPUR
- ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
by TEAM E – YELLAPUR
ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ! ಈ ಕೆರೆಯಲ್ಲಿ ಕಾಣಿಸಿಕೊಳ್ಳುವ ಮೊಸಳೆಯನ್ನು ಹಿಡಿದು ಬೇರೆಡೆಗೆ…
Read more: ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
- ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು ಯಲ್ಲಾಪುರ ಪಟ್ಟಣದ…
Read more: ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
- ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ
by TEAM E – YELLAPUR
- ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related