E-YELLAPUR. COM NEWS ಯಲ್ಲಾಪುರ.

13-6-2022. ಸೋಮವಾರ.

ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಮತದಾರ ಕ್ಷೇತ್ರದ ಚುನಾವಣೆಯ ಮತದಾನವು ಸೋಮವಾರ ತಾಲೂಕಿನಲ್ಲಿ ಶಾಂತಿ-ಸುವ್ಯವಸ್ಥೆಯಿಂದ ನಡೆಯಿತು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮತದಾರರು ಮತಚಲಾಯಿಸಿದರು.

ADVT

ತಾಲೂಕಿನಲ್ಲಿ 85 ಪುರುಷ ಮತದಾರರು, 50 ಮಹಿಳಾ ಮತದಾರರು ಒಟ್ಟೂ 135 ಮತದಾರರಿದ್ದು, ಸೋಮವಾರ 122 ಮತದಾರರು ಮತ ಚಲಾಯಿಸಿದ್ದಾರೆ. ಶೇ.90.37ರಷ್ಟು ಮತದಾನವಾಗಿದೆ.

ಪ್ರತಿ ಎರಡು ಗಂಟೆಗೆ ಚಲಾಯಿಸಲಾದ ಮತದಾನದ ವಿವರ.

ಬೆಳಿಗ್ಗೆ 8 ಗಂಟೆಯಿಂದ-10 ಗಂಟೆಯವರೆಗೆ ; 22, ಮಧ್ಯಾಹ್ನ 12 ಗಂಟೆಯವರೆಗೆ 61, ಮಧ್ಯಾಹ್ನ 2 ಗಂಟೆಯವರೆಗೆ 86, 4 ಗಂಟೆಯವರೆಗೆ-114 ಮತದಾರರು ಮತ ಚಲಾಯಿಸಿದರು.

ADVT

ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 77 ಪುರುಷ ಮತದಾರರು, 45 ಮಹಿಳಾ ಮತದಾರರು ಒಟ್ಟೂ 122 ಮತದಾರರು ಚಲಾಯಿಸಿದ್ದಾರೆ. 13 ಮತದಾರರು ಮತದಾನಕ್ಕೆ ಗೈರಾಗಿದ್ದಾರೆ. ಬೆಳಿಗ್ಗೆ ನಿಧಾನಗತಿಯಲ್ಲಿ ಮತದಾನ ಆರಂಭವಾಯಿತು.

ADVT

ಮತಗಟ್ಟೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಲಾಯಿತು. ಒಬ್ಬ ಬಿ.ಎಲ್.ಒ., ಒಬ್ಬ ಮೈಕ್ರೋ ಅಬ್ಸರ್ವರ್, ಸೇರಿದಂತೆ 8 ಸಿಬ್ಬಂದಿಗಳು ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದರು.

ADVT

ಮತಗಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ಮತಗಟ್ಟೆಯ ಹೊರಗೆ ಬೆಲ್ ರಸ್ತೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೂತ್ ಕೇಂದ್ರದಲ್ಲಿ ಆಯಾ ಪಕ್ಷಗಳ ಪ್ರಮುಖರು, ಕಾರ್ಯಕರ್ತರು ಕಾರ್ಯನಿರ್ವಹಿಸಿದರು.

ADVT

ಚುನಾವಣಾ ಮತಗಟ್ಟೆ ಬೂತ್‍ಗೆ ಆಗಮಿಸಿದ್ದ ಸಚಿವ ಶಿವರಾಮ ಹೆಬ್ಬಾರ್ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading