16-6-2022. ಗುರುವಾರ.

E-YELLAPUR.COM NEWS ಯಲ್ಲಾಪುರ.

ತಾಲೂಕಿನ ಕಿರವತ್ತಿ ಹಾಗೂ ಮದನೂರು ಗ್ರಾಮ ಪಂಚಾಯತಿಯ ಬೈಲಂದೂರು, ಹೊಸಳ್ಳಿ, ಕಿರವತ್ತಿ, ಕಂಚನಳ್ಳಿ, ಮದನೂರು, ಹೆಗ್ಗಾಪುರ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಮುಸುಕಿನ ಜೋಳಕ್ಕೆ ಫಾಲ್‍ಸೈನಿಕ ಹುಳುವಿನ ತೀವ್ರ ಬಾಧೆ ಕಾಡುತ್ತಿದ್ದು ಹತೋಟಿಗಾಗಿ ಈ ಕೆಳಗಿನ ಸಸ್ಯ ಸಂರಕ್ಷಣಾ ಕ್ರಮಗಳನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಭೇಟಿ ನೀಡಿದ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಹಾಗೂ ಆತ್ಮ ಯೋಜನೆಯ ವ್ಯವಸ್ಥಾಪಕ ಪ್ರಕಾಶ ಸಾಸನೂರು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 0.2 ರಿಂದ 0.4 ಗ್ರಾಂ. ಇಮಾಮೆಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಗೆ ಸಿಂಪಡಿಸಬೇಕು. ಅಥವಾ ಎಕರೆಗೆ 25 ಕೆ.ಜಿ ಉಸುಕಿನಲ್ಲಿ 15 ಗ್ರಾಂ. ಇಮಾಮೆಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು ಸೇರಿಸಿ ಸುಳಿಯ ಒಳಗೆ ಬೀಳುವಂತೆ ಹಾಕಬೇಕು. ಸಸ್ಯ ಸಂರಕ್ಷಣಾ ಔಷಧಿಗಳು ರೈತ ಕೇಂದ್ರದಲ್ಲಿ ರಿಯಾಯ್ತಿ ದರದಲ್ಲಿ ದೊರೆಯುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಯಲ್ಲಾಪುರ/ಮಂಚಿಕೇರಿ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.

ಯಲ್ಲಾಪುರ ತಾಲೂಕಿನಲ್ಲಿ 2022-23 ನೇ ಸಾಲಿಗೆ ಒಟ್ಟೂ 3192 ಹೆಕ್ಟೇರ್ ಕ್ಷೇತ್ರದಲ್ಲಿ ಕೃಷಿ ಬೆಳೆಗಳ ಬಿತ್ತನೆ ಗುರಿ ಇದ್ದು ಈವರೆಗೆ 206 ಹೆ. ಭತ್ತ, 5 ಹೆ. ಹತ್ತಿ, 15 ಹೆ. ಮುಸುಕಿನ ಜೋಳ ಹಾಗೂ 305 ಹೆ. ಕಬ್ಬು ಬಿತ್ತನೆಯಾಗಿದೆ. ಒಟ್ಟೂ 531 ಹೆ. [ಶೇ 16.63%] ಕ್ಷೇತ್ರದಲ್ಲಿ ಬಿತ್ತನೆಯಾಗಿರುತ್ತದೆ ಎಂದು ತಾಲೂಕಾ ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಜೂನ್ ಮೊದಲೆರಡು ವಾರಗಳಲ್ಲಿ 125 ಮಿಮಿ ವಾಡಿಕೆ ಮಳೆಯಾಗಬೇಕಿದ್ದು ಇಲ್ಲಿಯವರೆಗೆ ಕೇವಲ 54 ಮಿಮಿ ಮಳೆಯಾಗಿದ್ದು ಶೇ 56% ರಷ್ಟು ಮಳೆ ಕೊರತೆಯಾಗಿದೆ.

ಇದರಿಂದ ಬಿತ್ತನೆಗೆ ತೀವ್ರ ಹಿನ್ನೆಡೆಯಾಗಿರುತ್ತದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂಗಾರು ಇನ್ನು ಒಂದು ವಾರ ದುರ್ಬಲವಾಗುವ ಲಕ್ಷಣಗಳಿದ್ದು, ಭತ್ತ, ಹತ್ತಿ ಹಾಗೂ ಮುಸುಕಿನ ಜೋಳ ಬಿತ್ತನೆ ಮಾಡುವ ರೈತರು ಮಳೆ ನೋಡಿಕೊಂಡು ಬಿತ್ತನೆ ಮಾಡುವುದು ಸೂಕ್ತ. ತಾಲೂಕಿನಲ್ಲಿ ಇಂಟಾನ್, ಜಯಾ, ಎಮ್.ಟಿ.ಯು. 1001, ಐಆರ್ 64, ಬಿಪಿಟಿ ಹಾಗೂ ಆರ್‍ಎನ್‍ಆರ್ ಭತ್ತದ ತಳಿಗಳು ಒಟ್ಟೂ 154 ಕ್ವಿಂಟಾಲ್‍ಗಳಷ್ಟು ದಾಸ್ತಾನು ಇದ್ದು ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಿಂದ ಪಡೆದುಕೊಳ್ಳಬಹುದಾಗಿದೆ. ತಾಲೂಕಿನ ರಸಗೊಬ್ಬರ ಅಂಗಡಿಗಳಲ್ಲಿ 17 ಟನ್ ಯೂರಿಯಾ, 29 ಟನ್ ಪೊಟ್ಯಾಶ್ ಹಾಗೂ 112 ಟನ್‍ಗಳಷ್ಟು ಕಾಂಪ್ಲೆಕ್ಸ್ ಗೊಬ್ಬರಗಳು ದಾಸ್ತಾನು ಇದ್ದು ಹೆಚ್ಚಿನ ರಸಗೊಬ್ಬರ ದಾಸ್ತಾನಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿರುತ್ತದೆ ಎಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading