advt
28-6-2022. ಮಂಗಳವಾರ.
E-YELLAPUR.COM NEWS ಯಲ್ಲಾಪುರ.
ಬೈಕ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ನಾಯ್ಕನಕೆರೆಯ ಸಂತೋಷ ಲೊಪೀಸ್ ಅವರ ಬೈಕನ್ನು ಕಳ್ಳರು 11-06-2022 ರಂದು ರಾತ್ರಿ ರಾ.ಹೆದ್ದಾರಿ ಪಕ್ಕದ ಪಂಚರ ಅಂಗಡಿಯ ಎದುರಿನಿಂದ ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮಂಗಳವಾರ ಆರೋಪಿತರಾದ ಬಸವರಾಜ ಬಸು ತಂದೆ ರಮೇಶ ಕೂಗುನವ ಸಾ: ಗಜಮಿನಹಾಳ, ನೇಸರಗಿ,ತಾ: ಬೈಲ್‍ಹೊಂಗಲ್, ಬೆಳಗಾವಿ ಜಿಲ್ಲೆ, ರಾಜೀವ ರಾಜು ತಂದೆ ಯಲ್ಲಪ್ಪಾ ಮಾಡಮ್‍ಗೇರಿ, ಸಾ: ಚಿಕ್ಕಪ್ಪದರ ಓಣಿ, ಗಜಮಿನಹಾಳ, ನೇಸರಸಿ, ತಾ: ಬೈಲ್‍ಹೊಂಗಲ್, ಬೆಳಗಾವಿ ಜಿಲ್ಲೆ, ಲಕ್ಷ್ಮಪ್ಪ ತಂದೆ ಮಲ್ಲಪ್ಪ ಬಸರಿಮಠದ ಸಾ: ಗಜಮಿನಹಾಳ, ನೇಸರಗಿ, ತಾ: ಬೈಲ್‍ಹೊಂಗಲ್, ಬೆಳಗಾವಿ ಜಿಲ್ಲೆ. ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು ಆರೋಪಿತರಿಂದ ಪಲ್ಸರ್ ಮೋಟಾರ ಸೈಕಲ್‍ನ್ನು ಜಪ್ತುಪಡಿಸಿಕೊಂಡು ಆರೋಪಿತರನ್ನು ಬಂಧಿಸಿದ್ದಾರೆ.
advt
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ಸುಮನ ಪೆನ್ನೇಕರ, ಹೆಚ್ಚುವರಿ ಅಧೀಕ್ಷಕ ಎಸ್, ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಸುರೇಶ ಯಳ್ಳೂರ ಅವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಅಮೀನಸಾಬ್ ಎಮ್.ಅತ್ತಾರ, ಪಿ.ಎಸ್.ಐ ಮಂಜುನಾಥ ಗೌಡರ, ಹಾಗೂ ಸಿಬ್ಬಂದಿಯವರಾದ ಬಸವರಾಜ, ಮಹ್ಮದ ಶಪೀ, ಗಜಾನನ, ಮಹಾಂತೇಶ, ಶೋಭಾ, ನಾಯ್ಕ ಇವರು ಸಹ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಎಸ್ಪಿಯವರು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
- ಪಡಿತರ ಚೀಟಿದಾರರು ಅ.20 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿ
by TEAM E – YELLAPUR
- ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯ 1163 ಅರ್ಜಿಗಳ ವಿಲೇವಾರಿ : ಜಿಲ್ಲಾಧಿಕಾರಿ
by TEAM E – YELLAPUR
- ಗಂಧದ ಮರ ಕಡಿದವರು ಯಾರು? ತೀವ್ರಗೊಂಡ ತನಿಖೆ
by TEAM E – YELLAPUR
- ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
- ಬೈಕಿಗೆ ಕ್ರೂಸರ್ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೇ ಬೈಕ್ ಸವಾರ ಸಾವು
by TEAM E – YELLAPUR
- ಶಾಂತಿ, ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್
by TEAM E – YELLAPUR
- ಜೋಡುಕೆರೆಯ ಮೊಸಳೆಗೆ ಬಲೆಯ ಬೇಲಿ!
by TEAM E – YELLAPUR
- ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
by TEAM E – YELLAPUR
- ಸ್ವದೇಶಿ ವಸ್ತುಗಳ ಮಾರಾಟ ಮೇಳ, ಆಹಾರ ಮೇಳಕ್ಕೆ ಉದ್ಯಮಿ ಬಾಲು ನಾಯಕ ಚಾಲನೆ
by TEAM E – YELLAPUR
- ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಉತ್ತಮ ಸಾಧನೆ
by TEAM E – YELLAPUR
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related