
9-8-2022. ಮಂಗಳವಾರ.



ಯಲ್ಲಾಪುರ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭವಾದ ಎಂ.ಕೆ.ಬಿ. ಪರಿವಾರದ ನೂತನ ಮಹಾಲಕ್ಷ್ಮಿ ಸಿಲ್ಕ್ & ಸಾರೀಸ್ ಮಳಿಗೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗೆ ಆಗಮಿಸಿ, ತಮಗೆ ಇಷ್ಟವಾದ ವಿವಿಧ ಮಾದರಿಯ ಬಟ್ಟೆಗಳನ್ನು ಖರೀದಿಸುತ್ತಿದ್ದಾರೆ.

ಈ ಮಳಿಗೆಗೆ ಮಂಗಳವಾರ ಯಲ್ಲಾಪುರ ತಾಲೂಕಿನ ವಿವಿಧ ಭಾಗಗಳಿಂದ ಮಾತ್ರವಲ್ಲ, ನೆರೆಯ ತಾಲೂಕುಗಳಿಂದಲೂ ಸಹ ಬಟ್ಟೆ ಖರೀದಿಗೆಂದು ಗ್ರಾಹಕರು ಆಗಮಿಸಿದ್ದರು. ನೂತನ ಮಳಿಗೆಯ ಪ್ರಾರಂಭೋತ್ಸವದ ಅಂಗವಾಗಿ ನಡೆಯುತ್ತಿರುವ ಬಟ್ಟೆಗಳ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ಈ ಸುದ್ದಿಯ ವೀಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ವಿಶೇಷವಾಗಿ ಮಹಿಳೆಯರ ವೈವಿದ್ಯಮಯ ಉಡುಪುಗಳು, ಮಕ್ಕಳ ರೆಡಿಮೇಡ್ ಬಟ್ಟೆ ಹಾಗೂ ಹೊಸ ಡಿಸೈನ್ ಸೀರೆಗಳು ಮತ್ತು ಪುರುಷರ ಸಿದ್ಧ ಉಡುಪುಗಳ ಖರೀದಿ ಜೋರಾಗಿ ನಡೆದಿದೆ. ಆ.14ರ ವರೆಗೂ ಈ ಪ್ರದರ್ಶನ ಮತ್ತು ರಿಯಾಯತಿ ದರದ ಮಾರಾಟ ಮುಂದುವರಿಯಲಿದೆ.

ಉತ್ತಮ ಗುಣಮಟ್ಟದ ಆಕರ್ಷಕ ಬಟ್ಟೆಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವುದರಿಂದ ಈ ಮಳಿಗೆಗೆ ಆಗಮಿಸಿ ಬಟ್ಟೆಗಳನ್ನು ಖರೀದಿಸುತ್ತಿರುವುದಾಗಿ ನಮ್ಮ ಪ್ರತಿನಿಧಿಗೆ ಜೋಯ್ಡಾದಿಂದ ಆಗಮಿಸಿದ್ದ ಗ್ರಾಹಕರು ತಮ್ಮ ಅನಿಸಿಕೆಯನ್ನು ತಿಳಿಸಿದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಈ ನೂತನ ಮಳಿಗೆಗೆ ಆಗಮಿಸಿ ಶುಭಕೋರಿದರು.

ವಿವಿಧ ಕಂಪನಿಗಳ ಸುಪ್ರಸಿದ್ದ ಬ್ರ್ಯಾಂಡ್‍ಗಳ ಬಟ್ಟೆಗಳ ಹಾಗೂ ಹೊಸ ಮಾದರಿಯ ಬಟ್ಟೆಗಳ ಖರೀದಿಗೆ ಗ್ರಾಹಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನತ್ತಾರೆ ಈ ಮಳಿಗೆಯ ಪ್ರವರ್ತಕರು.


ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw











