
10-8-2022. ಬುಧವಾರ.
ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw

75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಯಲ್ಲಾಪುರ ತಾಲೂಕಿನ ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಶಾಲಾ ಮುಖ್ಯಾಧ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತಿಕ್ಷಣ ನೆನಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಪ್ರತಿ ಮನೆಯ ಮೇಲೆ ಅಗಸ್ಟ್ 13 ರಿಂದ 15 ರ ವರೆಗೆ ರಾಷ್ಟ್ರದ ಧ್ವಜ ಹಾರಿಸುವುದರ ಮೂಲಕ ಭಾರತೀಯರಾದ ನಮ್ಮೆಲ್ಲರ ಹೆಮ್ಮೆಯ ದೇಶಾಭಿಮಾನ ರಾರಾಜಿಸುವಂತೆ ಆಗಬೇಕು.
ಈ ಸುದ್ದಿಯ ವೀಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಮಕ್ಕಳಿಗೆ ಬಾಲ್ಯದಲ್ಲಿಯೇ ದೇಶ ಪ್ರೇಮ ಬಿತ್ತುವ ಕಾರ್ಯ ಶಾಲೆಯಲ್ಲಿ ನಡೆಯುತ್ತಿದ್ದು. ಅದನ್ನು ಈ ರೀತಿ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ ಮಕ್ಕಳಿಗೆ ತಾವು ಅವರಂತೆ ಹೆಮ್ಮೆಯ ಭಾರತೀಯನಾಗುವ ಕನಸು ಚಿಗುರಿಸಲು ಸಾಧ್ಯವಾಗುತ್ತದೆ. ತ್ಯಾಗ,ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯದ ಮಹತ್ವವನ್ನು ಅರಿಯಬೇಕು ಎಂದರು.

ಮಕ್ಕಳು ಕಿತ್ತೂರು ರಾಣಿ ಚೆನ್ನಮ್ಮ,ಝಾನ್ಸಿ ರಾಣಿ ಲಕ್ಷ್ಮೀಬಾಯಿ,ಸಂಗೊಳ್ಳಿ ರಾಯಣ್ಣ,ಛತ್ರಪತಿ ಶಿವಾಜಿ ನೆಹರು,ಸಾವಿತ್ರಿಬಾಯಿ ಪೂಲೆ,ಒನಕೆ ಓಬವ್ವ ಹೀಗೆ ವೇಷಭೂಷಣ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ವಂದನಾ ಬಾಂದಿ, ಆರಾಧ್ಯ ಭಟ್,ಕನಿಷ್ಕಾ ರಾಣೆ ಪ್ರಥಮ, ತೇಜಸ್ ಬಾಂದಿ ದ್ವಿತೀಯ, ರೋಹನ್ ಸಿದ್ದಿ, ತೃತೀಯ ಸ್ಥಾನವನ್ನು ಪಡೆದರು. ಪ್ರಥಮ ಭಟ್,ರಂಜಿತಾ ಗೌಡ,ಚಿತ್ರಾ ಸಿದ್ದಿ,ಗೌತಮಿ ಹೆಗಡೆ,ಪಂಚಮಿ ರಂಗೈಶೇಣ್ವಿ ಸಮಾಧಾನಕರ ಬಹುಮಾನವನ್ನು ಪಡೆದರು.

ಶಿಕ್ಷಕ ನಾಗರಾಜ ಆಚಾರಿ ಸ್ವಾಗತಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷೆ ರೂಪಾ ಎಮ್ ಬಾಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ಣಾಯಕರಾಗಿ ತ್ರೇಷಾ ನೋಹಾ, ಸೂರಜ್ ಶೆಟ್ಟಿ, ಅಮಿತ ನಾಯ್ಕ ಪಾಲ್ಗೊಂಡಿದ್ದರು. ಶಿಕ್ಷಕಿ ಮಮತಾ ನಾಯಕ ವಂದಿಸಿದರು. ಎಸ್.ಡಿ.ಎಮ್ ಸಿ ಸದಸ್ಯರು, ಪಾಲಕರು,ಮಾಜಿ ವಿದ್ಯಾರ್ಥಿಗಳು ಭಾಗಹಿಸಿದ್ದರು.











