
22-8-2022. ಸೋಮವಾರ.

ಗ್ರಾಮಸ್ಥರ ಬಹು ದಿನದ ಬೇಡಿಕೆಯಂತೆ ಯಲ್ಲಾಪುರ ತಾಲೂಕಿನ ತಟಗಾರದಲ್ಲಿ ನೂತನ ಗ್ರಾಮ ಅರಣ್ಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಸಮಿತಿಯ ಅಧ್ಯಕ್ಷರಾಗಿ ಸ್ಥಳೀಯ ಮುಖಂಡರಾದ ನರಸಿಂಹ ಭಟ್ಟ ಬೋಳಪಾಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜೋಡಳ್ಳದ ಲಕ್ಷ್ಮೀ ನರಸಿಂಹ ದೇವಸ್ಥಾನ ಸಭಾ ಭವನದಲ್ಲಿ ಸೋಮವಾರ ತಟಗಾರ ಅರಣ್ಯ ಸಮಿತಿಯ ಗ್ರಾಮ ಸಮೀಕ್ಷೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮ ನಡೆಯಿತು.


ಸಮಿತಿ ಸದಸ್ಯರಾಗಿ ದೇವಕಿ ನಾಗ್ಯಾ ಸಿದ್ದಿ, ಗೋಪಾಲ ನಾಗ್ಯ ಸಿದ್ದಿ, ಸಂಧ್ಯಾ ಗಣಪತಿ ಹೆಗಡೆ, ಮುಕುಂದ ಮರಾಠಿ, ಗವಾರ ಇಸ್ಮಾಯಲ್ ಶೇಖ್, ವಿಶ್ವನಾಥ ಗಣಪತಿ ಭಾಗ್ವತ, ಸವಿತಾ ಶ್ರಿಪತಿ ಹಂಗಾರಿ, ಅಚ್ಯುತಕುಮಾರ, ಅಪರ್ಣ ರವೀಂದ್ರ ಭಟ್ಟ ಹಾಗೂ ರಾಮಚಂದ್ರ ಹಂಗಾರಿ ಆಯ್ಕೆಯಾದರು. ಅರಣ್ಯ ಇಲಾಖೆಯ ಅಲ್ತಾಪ್ ಚೌಕಡಾಕ ಸಮಿತಿಯ ಕಾರ್ಯದರ್ಶಿಯಾಗಿದ್ದು, ಅರಣ್ಯ ಸಮಿತಿಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ತಟಗಾರ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಅರಣ್ಯ ಇಲಾಖೆಯವರಿಗೆ ಮತ್ತು ತಟಗಾರ ಗ್ರಾಮಸ್ಥರಿಗೆ ನರಸಿಂಹ ಬೋಳ್ಪಾಲು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹರೀಶ ಹರಿಕಂತ್ರ ಗ್ರಾಮ ಸಮೀಕ್ಷೆ ನಡೆಸಿ ತರಬೇತಿ ನೀಡಿದರು. ಅರಣ್ಯ ಇಲಾಖೆಯ ಬಸವಲಿಂಗಪ್ಪ, ಸುಗಮಾದಾರ ಕಿಶೋರ ನಾಯ್ಕ ಕಾರ್ಯಕ್ರಮದಲ್ಲಿದ್ದರು.
ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw












