


23-8-2022. ಮಂಗಳವಾರ.
ಹಸಿ ಸಾಗವಾನಿ ಮರಗಳನ್ನು ಕಡಿದು, ತುಂಡುಗಳಾಗಿ ಪರಿವರ್ತಿಸಿ ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯವರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/ join ಆಗಿ
ಯಲ್ಲಾಪುರ ತಾಲೂಕಿನ ಆನಗೋಡ ಗ್ರಾಮದ ದೋಣಿಗದ್ದೆ ಕಾಯ್ದಿಟ್ಟ ಅರಣ್ಯದಲ್ಲಿ ಮರಗಳನ್ನು ಕಡಿದು ಸಾಗಿಸುತ್ತಿದ್ದ ಆರೋಪಿಗಳಾದ ಅಕ್ಷಯ ಮಾದೇವ ಮರಾಠಿ, ಹುಟಕಮನೆ, ಸುಬ್ರಮಣ್ಯ ಬಾಬು ಸಿದ್ದಿ ಹುಟುಕಮನೆ ಇವರನ್ನು

ಬಂಧಿಸಿ 25000 ರೂ ಮೌಲ್ಯದ ಹಸಿ ಸಾಗವಾನಿ ಮರದ ತುಂಡುಗಳನ್ನು ಹಾಗೂ ಈ ಕೃತ್ಯಕ್ಕೆ ಉಪಯೋಗಿಸಿದ ಸಿಲ್ವರ್ ಕಲರ್ ಹೊಂಡೈ ಸೆಂಟ್ರೋ ವಾಹನವನ್ನು ವಶಪಡಿಸಿಕೊಂಡು ಅರಣ್ಯ ಕಾಯ್ದೆ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಹೆಚ್.ಎ, ವಲಯ ಅರಣ್ಯಾಧಿಕಾರಿ ಎನ್.ಎಲ್.ನಧಾಪ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಕಡಹಟ್ಟಿ

ಸಿಬ್ಬಂದಿಗಳಾದ ಶ್ರೀನಿವಾಸ ಉಮೇಶ ನಾಯ್ಕ, ಬಸಲಿಂಗಪ್ಪ ಬಸಪ್ಪ, ಅಶೋಕ ಶಿರಗಾಂವಿ, ಸುನೀಲ್ ಜಂಗಮಶೆಟ್ಟಿ, ಅಲ್ತಾಪ್ ಎನ್ ಚೌಕಡಾಕ, ಅಶೋಕ ಹಳ್ಳಿ, ಸಂಜಯಕುಮಾರ ಬೋರಗಲ್ಲಿ, ನಾಗರಾಜ ಕಲಘುಟಕರ, ಸಂತೋಷ ಕರಚಕಟ್ಟಿ, ಹಾಗೂ ಅರಣ್ಯ ರಕ್ಷಕರಾದ ಸಂಗಮೇಶ ಸುಂಕದ, ಯಂಕಪ್ಪ ಕೊಳಚಿ, ಮೆಹಬೂಬಸುಬಾನಿ, ಶಹನವಾಜ್ ಮುಲ್ತಾನಿ ವಾಹನ ಚಾಲಕರಾದ ದಿನೇಶ ಅಜ್ಜರಣೆ, ಪರಶುರಾಮ ಮಡಿವಾಳ ಮುಂತಾದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw








