15-9-2022. ಗುರುವಾರ.

ಯಲ್ಲಾಪುರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವಾರದಲ್ಲಿ ವಿವಿಧ ಇಲಾಖೆಯ ಆಶ್ರಯದಲ್ಲಿ ಗುರುವಾರ ಎಂಜಿನೀಯರ್ಸ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸುದ್ದಿಯ ವೀಡಿಯೋ ದೃಶ್ಯಾವಳಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ತಪ್ಪದೇ ಕ್ಲಿಕ್ ಮಾಡಿ.

ಲೋಕೋಪಯೋಗಿ ಇಲಾಖೆ, ಪಂಚಾಯತಿ ರಾಜ್ ಎಂಜನೀಯರಿಂಗ್ ವಿಭಾಗ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮುಂತಾದವುಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಪಂಚಾಯತಿ ರಾಜ್ ಎಂಜಿನೀಯರಿಂಗ್ ವಿಭಾಗದ ಎಇಇ ಅಶೋಕ ಬಂಟ್ ಮಾತನಾಡಿ, ನಮಗೆಲ್ಲ ಪ್ರಾತಃಸ್ಮರಣೀಯರಾದ ಭಾರತರತ್ನ, ಸರ್.ಎಂ.ವಿಶ್ವೇಶ್ವರಯ್ಯನವರು ನಮಗೆ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು. ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು. ಹೊಸ,ಹೊಸ ಆವಿಷ್ಕಾರಗಳನ್ನು, ಆಧುನಿಕ ತಂತ್ಜ್ಞಾನವನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸುವ ಮೂಲಕ ನಾಡಿನ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ನೀಡೋಣ ಎಂದರು.

ಇದನ್ನೂ ಓದಿ.

ಮಹಾಮೇಧಾವಿ, ಅಪ್ರತಿಮ ತಂತ್ರಜ್ಞ ಸರ್.ಎಂ.ವಿಶ್ವೇಶ್ವರಯ್ಯ

ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಎಇಇ ರವಿಕುಮಾರ್,ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನೀಯರ್ ವಿಶಾಲ ಕಟಾವ್ಕರ್, ಪ್ರಥಮದರ್ಜೆ ಗುತ್ತಿಗೆದಾರರಾದ ಅಶೋಕ ನಾಯ್ಕ ಇಡಗುಂದಿ, ಜೆ.ಇ.ಗಳಾದ ನವೀನ್ ನಾಯ್ಕ, ಸುಷ್ಮಾ, ಮೀನಾಕ್ಷಿ, ಪ್ರಮೋದ ಮುಂತಾದವರು ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ facebook group – https://www.facebook.com/groups/593852164946589/ join ಆಗಿ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading