15-9-2022. ಗುರುವಾರ.

ಯಲ್ಲಾಪುರದ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಾಗೂ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ. 17 ಶನಿವಾರದಂದು ಮಧ್ಯಾಹ್ನ 4 ಗಂಟೆಗೆ ಯಲ್ಲಾಪುರ ಪಟ್ಟಣದ ಬಸ್‍ನಿಲ್ಧಾಣ ಸಮೀಪದ ಏಕದಂತ ಆರ್ಕೆಡ್‍ನಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಲೋಕೋಪಯೋಗಿ ಇಲಾಖೆಯ ಎಇಇ ವಿ.ಎಂ.ಭಟ್ಟ, ಇನ್ಸ್ಟಾಲಿಂಗ್ ಆಫೀಸರ್ ಲಯನ್ ಗಿರೀಶ್ ಕುಚಿನಾಡ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸ್ನೇಹಸಾಗರ ಶಾಲೆಯ ಎನ್.ಎ.ಭಟ್ಟ,

ಇದನ್ನೂ ಓದಿ.

ಯಲ್ಲಾಪುರದಲ್ಲಿ ಅರ್ಥಪೂರ್ಣವಾಗಿ ನಡೆದ ಎಂಜಿನೀಯರ್ಸ್ ದಿನಾಚರಣೆ.

ಕೆ.ಜಿ.ಎಸ್.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಂಗಲಾ ವರ್ಣೇಕರ್, ಉಮ್ಮಚಗಿ ಸರ್ಕಾರಿ ಪ್ರೌಢಶಾಲೆಯ ರೇಖಾ ಹಳದೀಪುರ, ವಾಯ್.ಟಿ.ಎಸ್.ಎಸ್.ಶಾಲೆಯ ಶೈಲಜಾ, ಯಲವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಶೋಕ ಆರ್. ಹರಿಜನ್, ಕಟ್ಟಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಣಪತಿ ಕೃಷ್ಣ ಭಟ್ಟ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಲಾಗಿದೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ facebook group – https://www.facebook.com/groups/593852164946589/ join ಆಗಿ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading