ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವೈ.ಟಿ.ಎಸ್.ಎಸ್ ಆಂಗ್ಲಮಾಧ್ಯಮ ಶಾಲೆಯ ಸಾಧನೆ
ಯಲ್ಲಾಪುರ ಪಟ್ಟಣದ ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಸಾಧನೆ ಮಾಡಿದ್ದಾರೆ.
ಪ್ರಾಥಮಿಕ ವಿಭಾಗ: ಬಾಲಕರ ವಿಭಾಗದಲ್ಲಿ 100ಮೀ ಓಟ ಪಾರ್ಥ ದೇವಾಡಿಗ ಪ್ರಥಮ, 600 ಮೀ ಓಟ ನೀರಜ್ ಪಟಗಾರ ಪ್ರಥಮ, ಗುಂಡು ಎಸೆತ ಅನ್ವಿತ ನಾಯಕ ಪ್ರಥಮ, ಉದ್ದ ಜಿಗಿತ ಮತ್ತು 80 ಮೀ ಹರ್ಡಲ್ಸ್ ಅರ್ಷ ಶೇಖ್ ಪ್ರಥಮ, 4 * 100 ಮೀ ರೀಲೇ ಪ್ರಥಮ, ಖೊಖೊ ಪ್ರಥಮ, ಥ್ರೋ ಬಾಲ್ ಪ್ರಥಮ, 200 ಮೀ ಓಟ ಪಾರ್ಥ ದೇವಾಡಿಗ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಬಾಲಕಿಯರ ವಿಭಾಗ: ಚಕ್ರ ಎಸೆತ ನೀರಜಾ ನಾಯಕ ಪ್ರಥಮ, 600 ಮೀ ಓಟ ಪ್ರಣತಿ ಆಚಾರಿ ಪ್ರಥಮ, ಗುಂಪು ಆಟದಲ್ಲಿ ಬಾಲಕಿಯರ ವಿಭಾಗದಲಿ 4*100 ಮೀ ರೀಲೇ ಪ್ರಥಮ, ಖೊಖೊ ಪ್ರಥಮ, 100 ಮೀ ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಣತಿ ಆಚಾರಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಅರ್ಷ ಶೇಖ್ ವೈಯಕ್ತಿಕ ವಿರಾಗ್ರಣಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಒಳಾಂಗಣ ಆಟ ಕಲಾತ್ಮಕ ಯೋಗದಲ್ಲಿ ನಿಧಿ ಪೈ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.
ಪ್ರೌಢ ಶಾಲಾ ವಿಭಾಗ: ಸಮರ್ಥ ಮರಾಠೆ 100 ಮೀ ಓಟ ದ್ವಿತೀಯ, ಕುನಾಲ್ ಭಾಟಿ 3000 ಮೀ ಓಟ ದ್ವಿತೀಯ, ಮುವಾಜ್ ಖಾನ್ ಉದ್ದ ಜಿಗಿತ ದ್ವಿತೀಯ, ಗುಂಪು ಆಟದಲ್ಲಿ ಬಾಲಕರ ಖೊಖೊ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಂದನ ಗೌಡ 1500ಮೀ ಓಟ ತೃತೀಯ, ಜಗನ್ ನಾಯಕ ಪೋಲ್ ವಾಲ್ಟ್ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಒಳಾಂಗಣ ಆಟದಲ್ಲಿ ಕಲಾತ್ಮಕ ಯೋಗದಲ್ಲಿ ಪ್ರಥಮ ಅಂಬಿಗ ಪ್ರಥಮ ಸ್ಥಾನ, ಕರಾಟೆಯಲ್ಲಿ ಧನ್ಯಾ ಗಾಂವಕರ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಚೆಸ್‍ನಲ್ಲಿ ಶ್ರೇಯಸ್ ಜೋಶಿ ಮತ್ತು ಧನುಶ್ ಹೆಗಡೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮೂಲಕ ವಾಯ್.ಟಿ.ಎಸ್.ಎಸ್. ಆಂಗ್ಲ ಮಾಧ್ಯಮ ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದಿದೆ.