ಎರಡು ಉಡಗಳನ್ನು ಬೇಟೆಯಾಡಿ ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಅರಣ್ಯ ಇಲಾಖೆಯವರು ಮನೆಯೊಂದರ ಮೇಲೆ ದಾಳಿ ನಡೆಸಿ ಮೃತಪಟ್ಟ ಎರಡು ಉಡಗಳನ್ನು ಹಾಗೂ ಬೇಟೆಗೆ ಬಳಸಿದ್ದ ಕತ್ತಿಗಳನ್ನು, ಕೊಡಲಿಯನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೋಮವಾರ ಯಲ್ಲಾಪುರ ವಲಯ ವ್ಯಾಪ್ತಿಯ ಹಳಬೈಲ್ ಶಾಖಾ ವ್ಯಾಪ್ತಿ ಅರಳಿಕೊಪ್ಪ ಗಸ್ತು ಬ್ಲಾಕ್ ನ ಹಳಿಯಾಳ ಕ್ರಾಸ ಸಮೀಪದ ಕಣ್ಣಿಗೇರಿ ಗ್ರಾಮದ ಆರೋಪಿಗಳಾದ ಇನಾಸ್ ಬಸ್ಥ್ಯಾಂವ್ ಸಿದ್ದಿ ಹಾಗೂ ಈತನ ಮಗನಾದ ಪ್ರಕಾಶ್ ಇನಾಸ್ ಸಿದ್ದಿ ಇವರ ಮನೆಯಲ್ಲಿ ಯಾವುದೊ ವನ್ಯಪ್ರಾಣಿ ಭೇಟೆ ಆಡಿ ಮನೆಯಲ್ಲಿ ದಾಸ್ತಾನಿಟ್ಟ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ, ಮೃತಪಟ್ಟ ಎರಡು ಗಂಡು ಉಡಗಳು ಹಾಗೂ ಭೇಟೆಗೆ ಬಳಸಿದ ಎರಡು ಕತ್ತಿಗಳು ಮತ್ತು ಒಂದು ಕೊಡಲಿಯನ್ನು ಇಲಾಖಾ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ -1972 ಸೆಕ್ಷನ್ 2(16),9,39ಹಾಗೂ 50 ರ ಉಲ್ಲಂಘನೆ ಆದ ಕುರಿತು ಮೊಕದ್ದಮೆ ದಾಖಲಿಸಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎಚ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸುಭಾಷ್ ಗಾಂವ್ಕರ್, ಶ್ರೀನಿವಾಸ್ ನಾಯ್ಕ, ಶ್ರೀಧರ್ ಸಜ್ಜನ್, ಶರಣಬಸು ದೇವರ,ಪ್ರಭಾಕರ ಬಗಲಿ,ಮಂಜುನಾಥ್ ಗರ್ಭಗುಡಿ, ದರ್ಶನ್ ವಿ ಎಸ್ ಹಾಗೂ ಗಸ್ತು ಅರಣ್ಯ ಪಾಲಕರಾದ ಶ್ರೀ ಸತೀಶ ಕುಂಬಾರ, ಬಸವರಡ್ಡಿ ರಡ್ಡೇರ, ರಾಮು ಕೊಕ್ಕರೆ, ಶಾನವಾಜ ಮುಲ್ತಾನಿ, ಗೌಡಪ್ಪ ಗೌಡ ಸುಳ್ಳದ, ರಮೇಶ್ ಬಡಿಗೇರ್, ಲಕ್ಷ್ಮಣ ಪಮ್ಮಾರ್, ಪ್ರಶಾಂತ್ ತಳವಾರ್, ವಾಹನ ಚಾಲಕರಾದ ಮಂಜುನಾಥ, ಪ್ರಶಾಂತ ಹಾಗೂ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು