ಯಲ್ಲಾಪುರ ಅಕ್ರಮವಾಗಿ ಮನೆಯನ್ನು ಪ್ರವೇಶಿಸಿದ ಇಬ್ಬರು, ವ್ಯಕ್ತಿಯೊಬ್ಬನಿಗೆ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ ಘಟನೆ ತಾಲೂಕಿನ ಕಿರವತ್ತಿಯಲ್ಲಿ ನಡೆದಿದೆ.

ಈ ಕುರಿತು ಕಿರವತ್ತಿಯ ಇಂದಿರಾನಗರದ ಸುಭಾನಿ ಹುಸೇನ್ ಸಾಬ್ ಪೀರಾ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಾದ ಕಿರವತ್ತಿಯ ಇಂದಿರಾನಗರದ ಆಸ್ಫಾಕ್ ಭಾಷಾಸಾಬ್ ಬೇವಿನಮರ ಮತ್ತು ಸುಭಾನಿ ಭಾಷಾಸಾಬ ಬೇವಿನಮರ ಸೆ.26ರಂದು ರಾತ್ರಿ 10.30 ಗಂಟೆಗೆ ಸುಭಾನಿ ಹುಸೇನ್ ಸಾಬ್ ಪೀರಾ ಅವರ ಮನೆಗೆ ಅಕ್ರಮವಾಗಿ ಪ್ರವೇಶಮಾಡಿ ಅವಾಚ್ಯವಾಗಿ ಬೈದಿದ್ದಾರೆ.

ನಂತರ ಇಬ್ಬರೂ ಆರೋಪಿಗಳು ಸೇರಿಕೊಂಡು ಸುಭಾನಿ ಹುಸೇನ್ ಸಾಬ್ ಪೀರಾ ಅವರ ಮೇಲೆ ಹಲ್ಲೆಮಾಡಿದ್ದಾರೆ. ನಂತರ ಸುಭಾನಿ ಹುಸೇನ್ ಸಾಬ್ ಪೀರಾ ಅವರಿಗೆ ಜೀವಬೆದರಿಕೆಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

==================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading