ನದಿ ತಿರುವು ಯೋಜನೆ ವಿರೋಧಿಸಿ ನ.3 ಮಂಗಳವಾರ ಯಲ್ಲಾಪುರದಲ್ಲಿ ನಡೆಯಲಿರುವ ಹೆದ್ದಾರಿ ತಡೆ ಪ್ರತಿಭಟನೆಗೆ ಸಿದ್ಧತೆಗಳು ಪೂರ್ಣಗೊಂಡಿವೆ.

ಮಂಗಳವಾರ ಬೆಳಿಗ್ಗೆ 9.30 ಗಂಟೆಗೆ ಬಸ್ ನಿಲ್ದಾಣ ಸಮೀಪದ ಟಿ.ಎಂ.ಎಸ್.ಸೂಪರ್ ಮಾರ್ಟ್ ಹತ್ತಿರ ಸಭೆ ಸೇರುವುದೆಂದು ತಿಳಿಸಲಾಗಿದೆ. ಪರಿಸರತಜ್ಞರುಇಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮೆರವಣಿಗೆಯ ಮೂಲಕ ಎಲ್.ಎಸ್.ಎಂ.ಪಿ. ಸೊಸೈಟಿ ಎದುರು ಹೆದ್ದಾರಿಯಲ್ಲಿ 11 ಗಂಟೆಗೆ ಪ್ರತಿಭಟನಾ ಸಭೆ ಆರಂಭವಾಗಲಿದೆ. ಹಲವು ಪ್ರಮುಖರು ಇಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಾಹನ ನಿಲುಗಡೆ ವ್ಯವಸ್ಥೆ

ಶಿರಸಿ ಕಡೆಯಿಂದ ಬರುವವರು ತಮ್ಮ ವಾಹನಗಳನ್ನು ಎಪಿಎಂಸಿ ಆವರಣದಲ್ಲಿ ನಿಲ್ಲಿಸಬೇಕು, ಕಾರವಾರ ರಸ್ತೆ ಕಡೆಯಿಂದ ಬರುವವರು ಶಾರದಾಂಬಾ ದೇವಾಲಯದ ಆವರಣದಲ್ಲಿ ಮತ್ತು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಾಗೂ ಆನಗೋಡ,ಬಿಸಗೋಡ ಕಡೆಯಿಂದ ಬರುವವರು ತಮ್ಮ ವಾಹನಗಳನ್ನು ಐಬಿ ರಸ್ತೆಯಲ್ಲಿ ವಾಯ್.ಟಿ.ಎಸ್.ಎಸ್.ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕೆಂದು ತಿಳಿಸಲಾಗಿದೆ. ವಾಹನಗಳನ್ನು ನಿಗದಿತ ಜಾಗಗಳಲ್ಲಿ ನಿಲ್ಲಿಸಿ, ಸಶಕ್ತರು ನಡೆದುಕೊಂಡು ಪ್ರತಿಭಟನಾ ಸ್ಥಳಕ್ಕೆ ಬರಬೇಕು, ನಡೆದುಕೊಂಡು ಬರಲು ಅಶಕ್ತರಾದವರಿಗೆ ಸಮೀತಿಯ ವತಿಯಿಂದ ಪಟ್ಟಣದಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ.

ಊಟೋಪಚಾರ ವ್ಯವಸ್ಥೆ

ಪ್ರತಿಭಟನಾಕಾರರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ, ಎಲ್.ಎಸ್.ಎಂ.ಪಿ. ಸೊಸೈಟಿ ಪಕ್ಕದ ಮೈದಾನದಲ್ಲಿ ಪೆಂಡಾಲ್ ಹಾಕಲಾಗಿದ್ದು, ಊಟದ ವಿತರಣೆಗೆ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದು ರಸ್ತೆ ತಡೆ ಸಂಚಾಲನಾ ಸಮೀತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ವಿನಂತಿಸಿದ್ದಾರೆ.

================

Leave a Reply

You cannot copy content of this page