ಸ್ವಾರ್ಥದ ಪರಿಧಿಯಿಂದ ಹೊರಬರುವುದು ಮೋಕ್ಷಕ್ಕೆ ದಾರಿಯಾಗಿದೆ, ಸ್ವಾರ್ಥದಿಂದ ದುಃಖ ಉಂಟಾದರೆ, ಸ್ವಾರ್ಥರಹಿತ ಚಿಂತನೆಯು ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ನೀಡುತ್ತದೆ ಎಂದು ಶಿರಳಗಿ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.
ಅವರು ಯಲ್ಲಾಪರ ತಾಲೂಕಿನ ಭಟ್ರಕೇರಿಯ ಭಾರದ್ವಾಜಾಶ್ರಮದಲ್ಲಿ ರಾಷ್ಟ್ರಹಿತವನ್ನು ಸಂಕಲ್ಪಿಸಿ ನಡೆದ 400 ನೇ ಧಾರ್ಮಿಕ ಕಾರ್ಯಕ್ರಮದ ಸಮಾರೋಪದ ಸಂದರ್ಭದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಸನಾತನ ಧರ್ಮದಲ್ಲಿ ಉದಾತ್ತ ಚಿಂತನೆ ಇದೆ, ಸಂಕುಚಿತತೆ ಇಲ್ಲ, ಫಲಾಪೇಕ್ಷೆ ಇಲ್ಲದ, ನಿಷ್ಕಾಮ ಕರ್ಮ ಮಾಡಿದರೆ ದೈವೀ ಬಲವೂ ಲಭಿಸುತ್ತದೆ ಎಂದರು.
ಆರ್.ಎಸ್.ಎಸ್. ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ವಿಘ್ನೇಶ್ವರ ಗಾಂವ್ಕಾರ್, ಜಿ.ವಿ.ಹೆಗಡೆ ಶಿರಸಿ, ಕೋಮಲಾ ಹೆಗಡೆ, ಭಾರಧ್ವಾಜಾಶ್ರಮದ ಮುಖ್ಯಸ್ಥ ಮಂಜುನಾಥ ಭಟ್ಟ ಮುಂತಾದವರು ಇದ್ದರು.
ಸುಂದರ ಕಾಂಡದ ಕುರಿತು ನಾರಾಯಣ ದಾಸ ಅವರಿಂದ ಕೀರ್ತನೆ ನಡೆಯಿತು.