ಸಾಂಸ್ಕೃತಿಕಸ್ಪರ್ಧೆಗಳಲ್ಲಿ ಚೇತನಾ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ
ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿಯ ಚೇತನಾ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಂ ಜಿ ಸಿ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ ಸಿದ್ದಾಪುರದ ತಾಲೂಕಾ ಮಟ್ಟದ ಸಾಂಸ್ಕೃತಿಕಸ್ಪರ್ಧಾ ಕಾರ್ಯಕ್ರಮದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಎರಡು ವಿಭಾಗದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸ್ಥಾನ ಗಳಿಸಿರುತ್ತಾರೆ.ಒಟ್ಟೂ 22 ಸ್ಪರ್ಧೆಗಳಲ್ಲಿ 14 ಸ್ಪರ್ಧೆ ಪ್ರಶಸ್ತಿ ಗಳಿಸಿದ್ದು, ಪ್ರಥಮ ಪಿಯುಸಿ ವಿಭಾಗದಲ್ಲಿ ವಿರಾಗ್ರಣಿ ಪ್ರಶಸ್ತಿ ಗಳಿಸಿದ್ದಾರೆ. ಪ್ರಥಮ ಪಿಯುಸಿ ವಿಭಾಗದ ರಸಪ್ರಶ್ನೆಯಲ್ಲಿ ಅಕ್ಷಯ ಕುಸೂರ ಹಾಗೂ ಕಿಶೋರ ಎನ್ ಆರ್. ಪ್ರಥಮ ಸ್ಥಾನ, ಇಂಗ್ಲೀಷ್ ಪ್ರಬಂಧದಲ್ಲಿ ವರ್ಷಿತಾ ನಾಯ್ಕ ಪ್ರಥಮ, ಚಿತ್ರಕಲೆ ಭುವನ ನಾಯ್ಕ ಪ್ರಥಮ, ದ್ವಿತೀಯ ಪಿಯುಸಿ ಯ ಇಂಗ್ಲಿಷ್ ಚರ್ಚೆ ಯಲ್ಲಿ ಅಮೀಷಾ ಕವಾರ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ ಪಿಯುಸಿಯ ವಿಜ್ಞಾನ ಮಾದರಿಯಲ್ಲಿ ಬಿಂದು ಡಿ ಎನ್ ದ್ವಿತೀಯ, ಜಾನಪದ ನೃತ್ಯ ಹೇಮಾವತಿ ತೃತೀಯ,ಕನ್ನಡ ಚರ್ಚೆ ಕೃತಿಕಾ ಎನ್ ದ್ವೀತಿಯ, ಏಕಪಾತ್ರಾಭಿನಯ ಕೆ ಸಾಯಿಶ್ರೀ ದ್ವಿತೀಯ,ಭಾವಗೀತೆ ರಶ್ಮೀತಾ ದ್ವಿತೀಯ,ಇಂಗ್ಲಿಷ್ ಚರ್ಚೆ ಶ್ರೀಧರ ಕಿಣಿ ದ್ವಿತೀಯ, ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಜಾನಪದ ನೃತ್ಯ ಸೃಷ್ಟಿ ಜೆ ದ್ವಿತೀಯ, ಏಕಪಾತ್ರಾಬಿನಯ ಚೇತನಾ ಮಡಿವಾಳ ದ್ವಿತೀಯ, ಶೃತಿ ವಿಜ್ಞಾನ ಮಾದರಿ ದ್ವಿತೀಯ, ಪಲ್ಲವಿ ನಾಯ್ಕ ಚಿತ್ರಕಲೆ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ .
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಹಾಗೂ ಕಾಲೇಜಿನ ಪ್ರಾಚಾರ್ಯ ರಾಜು ಭಟ್ಟ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.