24-5-2022. ಮಂಗಳವಾರ.

E-YELLAPUR.COM NEWS ಯಲ್ಲಾಪುರ.

ಕಳೆದ ಮೇ.11 ರಂದು ಸಾಯಂಕಾಲ 6 ಗಂಟೆಯಿಂದ, ಮೇ.12ರಂದು ಬೆಳಗ್ಗೆ 9.30 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ಪಟ್ಟಣದ ಸಂಭ್ರಮ್ ಕ್ರಾಸ್ ಹತ್ತಿರ ಇರುವ

ADVT

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಗೋಡೆಯ ಕಿಟಕಿಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ಲನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಕಿತ್ತು ತೆಗೆದು ಬ್ಯಾಂಕ್ ಒಳಗಡೆ ಒಳಪ್ರವೇಶ ಮಾಡಿ ಬ್ಯಾಂಕ್‍ನ ನೆಲ ಮಹಡಿಯಲ್ಲಿರುವ ಕಬ್ಬಿಣದ ಕಪಾಟನ್ನು ಮೀಟಿ ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVT

ಈ ಪ್ರಕರಣದ ತನಿಖೆ ನಡೆಸಿದ ಪೋಲೀಸರು ಆರೋಪಿತನಾದ ಉಮೇಶ ತಂದೆ ಗೋವಿಂದಪ್ಪಾ ಹಾನಗಲ್ ಪ್ರಾಯ: 40 ವರ್ಷ, ಕಾಳಮ್ಮನಗರ, ಆಶ್ರಯ ಕಾಲೋನಿ, ಯಲ್ಲಾಪುರ

ADVT

ಈತನನ್ನು ಮಂಗಳವಾರ ಬಂಧಿಸಿದ್ದಾರೆ. ಈತ ಟೈಲ್ಸ್ ಕೆಲಸ ಮಾಡುತ್ತಿದ್ದ. ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್, ಒಂದು ಕಾರ್ ಮತ್ತು ಒಂದು ಮೋಟಾರ ಸೈಕಲ್‍ನ್ನು ಜಪ್ತುಪಡಿಸಿಕೊಂಡು ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ.

ADVT

ಈ ಕಾರ್ಯಾಚರಣೆಯನ್ನು ಜಿಲ್ಲಾ ಎಸ್ಪಿ ಡಾ.ಸುಮನ ಪೆನ್ನೇಕರ,ಹೆಚ್ಚುವರಿ ಪೊಲೀಸ ಅಧೀಕ್ಷಕರಾದಎಸ್. ಬದರಿನಾಥ, ಪೊಲೀಸ್ ಉಪಾಧೀಕ್ಷಕರಾದ ರವಿ ನಾಯ್ಕ ಅವರ

ADVT

ಮಾರ್ಗದರ್ಶನದಲ್ಲಿ ಯಲ್ಲಾಪುರ ಠಾಣೆಯ ಸಿಪಿಐ ಸುರೇಶ ಯಳ್ಳೂರ ಅವರ ನೇತ್ರತ್ವದಲ್ಲಿ ಕೈಗೊಳ್ಳಲಾಗಿದ್ದು, ಪಿ.ಎಸ್.ಐ ಅಮೀನಸಾಬ ಎಮ್.ಅತ್ತಾರ, ಪಿ.ಎಸ್.ಐ ಮಂಜುನಾಥ ಗೌಡರ, ಪ್ರೊಬೇಶ್ನರಿ ಪಿ.ಎಸ್.ಐ ಶಿವಕುಮಾರ,

ADVT

ಹಾಗೂ ಸಿಬ್ಬಂದಿಗಳಾದ ಬಸವರಾಜ, ಮಹ್ಮದ ಶಪೀ, ಗಜಾನನ, ಚಿದಾನಂದ, ಶೋಭಾ, ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು. ಈ ಪ್ರಕರಣವನ್ನು ಬೇಧಿಸಿದ ಪೋಲೀಸರಿಗೆ ಎಸ್ಪಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ADVT

ಬ್ಯಾಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಪೋಲೀಸರಿಂದ ವಿಶೇಷ ಸೂಚನೆ:

1) ಬ್ಯಾಂಕ್/ಎಟಿಎಮ್/ ಸೇವಾ ಸಹಕಾರಿ ಸಂಘಗಳ ಒಳಗೆ ಹಾಗೂ ಹೊರಗಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತಹ ಉತ್ತಮ ಗುಣಮಟ್ಟದ CC ಕ್ಯಾಮೆರಾಗಳನ್ನು ಹಾಗೂ ರಸ್ತೆಗಳ ಕಡೆಗೆ CC ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.

ADVT

2) ಸೆಕ್ಯುರಿಟಿ ಗಾರ್ಡ್‍ನ್ನು ಕಡ್ಡಾಯವಾಗಿ ನೇಮಿಸಿಕೊಳ್ಳುವುದು, ಹಾಗೂ ಗೋಡೆಗೆ ಉತ್ತಮವಾದ ಕಿಟಕಿ ಬಾಗಿಲುಗಳನ್ನು ಅಳವಡಿಸುವುದು.
3) ಸುಭದ್ರವಾದ ಸ್ಟ್ರಾಂಗ್ ರೂಮ್ ಲಾಕರ್/ ಬಾಗಿಲುಗಳನ್ನು ಅಳವಡಿಸುವುದು ಹಾಗೂ ಅದರಲ್ಲಿ ಕೂಡ ಕಡ್ಡಾಯವಾಗಿ CC ಕ್ಯಾಮೆರಾವನ್ನು ಅಳವಡಿಸಬೇಕು.

4) ಸೈರನ್/ದೂರವಾಣಿ ಮೂಲಕ ಮಾಹಿತಿ ತಿಳಿಸುವ ತಂತ್ರಜ್ಞಾನವನ್ನು ಅಳವಡಿಸುವುದು, ಮತ್ತು ಉನ್ನತ ಮಟ್ಟದ CC ಕ್ಯಾಮೇರಾವನ್ನು ಅಳವಡಿಸಬೇಕು.
5) DVR/NVR ಕಳ್ಳರಿಗೆ ಕಾಣದಂತೆ/ಕೀಳಲು/ಕಳುವುಮಾಡಲು ಬಾರದಂತೆ ಸುಭದ್ರವಾಗಿ ಇರಬೇಕು.

6) ಬ್ಯಾಂಕಿಗೆ ಬರುವ ಗ್ರಾಹಕರ ಸ್ಪಷ್ಟವಾದ ಹೆಸರು ವಿಳಾಸ, ಮೊಬೈಲ ನಂ, ಎಕೌಂಟ ನಂಬರ ಇತ್ಯಾದಿಗಳನ್ನು, ರಜಿಸ್ಟರ್‍ದಲ್ಲಿ ದಾಖಲಿಸಬೇಕು. ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ಪೋಲೀಸರಿಗೆ ಮಾಹಿತಿ ನೀಡಬೇಕು.
7) ಸಾರ್ವಜನಿಕರು ತಮ್ಮ ವ್ಯವಹಾರವನ್ನು ಸುರಕ್ಷಿತವಾಗಿರುವ ಬ್ಯಾಂಕಿನಲ್ಲಿ ನಡೆಸಲು ಸಿಪಿಐ ಸುರೇಶ ಯಳ್ಳೂರು ಕೋರಿದ್ದಾರೆ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading